ಕರ್ನಾಟಕ

karnataka

ETV Bharat / sitara

ನಾನಿಂದು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದೇನೆ ಎಂದರೆ ಗುಂಡಮ್ಮ ಪಾತ್ರವೇ ಕಾರಣ: ಗೀತಾ ಭಾರತಿ ಭಟ್ - ಎಂದರೆ ಗುಂಡಮ್ಮ ಪಾತ್ರವೇ ಕಾರಣ

ಬ್ರಹ್ಮಗಂಟು ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಗೀತಾ ಭಾರತಿ ಭಟ್, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಅಭಿನಯಿಸಿದ್ದರು.

Geeta bhat
Geeta bhat

By

Published : Apr 15, 2021, 3:34 PM IST

ಬೆಂಗಳೂರು: ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ಗೀತಾ ಅಲಿಯಾಸ್ ಗುಂಡಮ್ಮ ಆಗಿ ನಟಿಸಿದ್ದ ಗೀತಾ ಭಾರತಿ ಭಟ್, ಬಿಗ್ ಬಾಸ್ ಮನೆ ಪ್ರವೇಶಿಸಿದಾಗ ಬ್ರಹ್ಮಗಂಟು ಧಾರಾವಾಹಿಯ ಅಭಿಮಾನಿಗಳು ಧಾರಾವಾಹಿ ಮುಕ್ತಾಯಗೊಳ್ಳುತ್ತದೆ ಎಂದುಕೊಂಡಿದ್ದರು.

ಆದರೆ ಧಾರಾವಾಹಿ ಮಾತ್ರ ಪ್ರಸಾರವಾಗುತ್ತಿತ್ತು. ಇದರ ಜೊತೆಗೆ ಗೀತಾ ಭಾರತಿ ಭಟ್ ಎರಡು ತಿಂಗಳು ಧಾರಾವಾಹಿ ಶೂಟಿಂಗ್​​​ನಿಂದ ದೂರ ಉಳಿದಿದ್ದರು.

ಈಗ ಬಿಗ್ ಬಾಸ್ ಮನೆಯಿಂದ ಮರಳಿರುವ ಗೀತಾ ಭಾರತಿ ಭಟ್, "ಗುಂಡಮ್ಮ ಪಾತ್ರ ನನಗೆ ಖ್ಯಾತಿ ನೀಡಿತು. ಇದು ನನ್ನ ಬದುಕಿನ ಉತ್ತಮ ವಿಷಯ. ಆದರೆ ನಾನು ಬ್ರಹ್ಮಗಂಟುವಿನಲ್ಲಿ ಕಂಬ್ಯಾಕ್ ಮಾಡುತ್ತಿಲ್ಲ" ಎಂದಿದ್ದಾರೆ.

ಬ್ರಹ್ಮಗಂಟು ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಗೀತಾ ಭಾರತಿ ಭಟ್, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಅಭಿನಯಿಸಿದ್ದರು. ಮುಂದೆ ಲವ್ ಮಾಕ್ಟೈಲ್ ಸಿನಿಮಾದಲ್ಲಿ ರೀಮಾ ಆಗಿ ಅಭಿನಯಿಸಿದ್ದರು ಗೀತಾ ಭಾರತಿ ಭಟ್.

ಇದೀಗ ಲವ್ ಮಾಕ್ಟೈಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗಿತ್ತಿದ್ದು, ಅದರಲ್ಲಿ ರಿಮಾ ಪಾತ್ರದಲ್ಲಿ ಗೀತಾ ನಟಿಸುತ್ತಿದ್ದಾರೆ. ಜೊತೆಗೆ ಸ್ವೀಟೂ ಎನ್ನುವ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು ಗೀತಾ ಭಾರತಿ ಭಟ್.

ABOUT THE AUTHOR

...view details