ನಟ ಚಂದನ್ ಕುಮಾರ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಮರಳಿ ಮನಸಾಗಿದೆ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಗೃಹಸ್ಥನಾಗಿ ಪ್ರೇಕ್ಷಕರ ಮನಗೆದ್ದಿದ್ದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಂದನ್ ಅಭಿನಹಿಸುತ್ತಿರುವ ಮರಳಿ ಮನಸಾಗಿದೆ ಧಾರವಾಹಿಯಲ್ಲಿ ಖಾಕಿ ಖದರಿನಲ್ಲಿ ಮಿಂಚಲಿದ್ದಾರೆ. ಇದರ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದ್ದು, ಇದರಲ್ಲಿ ದಿವ್ಯಾ ವಾಗುಕರ್, ಶಿಲ್ಪಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮರಳಿ ಮನಸಾಗಿದೆ ಹೊಸ ಧಾರವಾಹಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಲು ತುಡಿಯುವ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಇದರಲ್ಲಿ ಪ್ರೇಮಕಥೆಯೂ ಇದೆ. ಅದು ಕಥೆಯಲ್ಲಿ ಕುತೂಹಲಕಾರಿ ತಿರುವುಗಳನ್ನು ತರುತ್ತದೆ ಎಂದು ತಮ್ಮ ಪಾತ್ರ ಹಾಗೂ ಧಾರವಾಹಿಯ ಬಗ್ಗೆ ನಟ ಚಂದನ್ ಅನುಭವ ಹಂಚಿಕೊಂಡರು.
ಈ ಪಾತ್ರವನ್ನು ತೆಗೆದುಕೊಳ್ಳುವ ಮೊದಲು ಚಂದನ್ ಅವರು ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಫಿಟ್ ಆಗಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಲಾಕ್‌ಡೌನ್ ಮೊದಲಿನ ಹಾಗೂ ನಂತರದ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗ ಅಭಿಮಾನಿಗಳು ಕಾಲೆಳೆದಿದ್ದರು. ಇದಕ್ಕೆಲ್ಲ ಉತ್ತರ ಎಂಬಂತೆ ರಗಡ್ ಲುಕ್‌ನಲ್ಲಿ ಚಂದನ್ ಕಾಣಿಸಿದ್ದಾರೆ.
ಈ ಧಾರಾವಾಹಿ ಘಮ್ ಹೇ ಕಿಸಿ ಕೆ ಪ್ಯಾರ್ ಮೇ ಎಂಬ ಹಿಂದಿ ಧಾರವಾಹಿಯ ರಿಮೇಕ್ ಆಗಿದ್ದು, ಕನ್ನಡ ಸೊಬಗಿನಲ್ಲಿ ಮೂಡಿ ಬರಲಿದೆ. ಆಗಸ್ಟ್ 9ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.