ಕರ್ನಾಟಕ

karnataka

ETV Bharat / sitara

Happy Birthday Avinash: ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ - ಕನ್ನಡದ ಹಿರಿಯ ನಟ ಅವಿನಾಶ್‌ ಜನ್ಮ ದಿನ

ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿರುವ ಅವಿನಾಶ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಅವಿನಾಶ್‌
ಅವಿನಾಶ್‌

By

Published : Dec 22, 2021, 8:46 AM IST

ಕನ್ನಡದ ಹಿರಿಯ ನಟ ಅವಿನಾಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಆಚರಣೆಯಲ್ಲಿರುವ ಅವಿನಾಶ್​ಗೆ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಕಳೆದ ಮೂರೂವರೆ ದಶಕಗಳಿಂದ ಕನ್ನಡ ಸೇರಿದಂತೆ ಇತರೆ ಭಾಷೆಗಳ ಚಿತ್ರಗಳಲ್ಲೂ ಅಭಿನಯಿಸುತ್ತಾ ಬಂದಿರುವ ಅವಿನಾಶ್, ಚಾಮರಾಜನಗರ ಜಿಲ್ಲೆಯ ಯಳಂದೂರುನಲ್ಲಿ 22 ಡಿಸೆಂಬರ್​ 1959 ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಂಎ ಪದವಿ ಪಡೆದು, ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದರು. ನಂತರ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು ಲಂಡನ್‌ನ ಮೆರ್ಮೇಡ್ ಥಿಯೇಟರ್‌ನಲ್ಲಿ ತರಬೇತಿ ಪಡೆದು, ಇಂದು ಹಿರಿ ತೆರೆಯಲ್ಲಿ ಪೋಷಕ ನಟನಾಗಿ ಮಿಂಚುತ್ತಿದ್ದಾರೆ.

ಅವಿನಾಶ್‌

ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾ ಸೇರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಯುದ್ಧಕಾಂಡ, ಸಂಗ್ಯಾ ಬಾಳ್ಯ, ಚಿನ್ನಾರಿ ಮುತ್ತ, ಕಿಲಾಡಿಗಳು, ದುರ್ಗಿ, ಕಲಾಸಿಪಾಳ್ಯ, ಆಪ್ತಮಿತ್ರ, ಪೊರ್ಕಿ, ಆಪ್ತರಕ್ಷಕ, ಪೃಥ್ವಿ , ಹುಡುಗರು, ಪರಮಾತ್ಮ , ಅಣ್ಣ ಬಾಂಡ್, ಶಕ್ತಿ , ಮದರಂಗಿ, ಎರಡನೇ ಸಲ, ರಾಜಕುಮಾರ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಪತ್ನಿ ಮಾಳವಿಕಾ ಜೊತೆ ಅವಿನಾಶ್

2001 ರಲ್ಲಿ ಸಹ ನಟಿ ಮಾಳವಿಕಾ ಅವರನ್ನು ವಿವಾಹವಾದ ಅವಿನಾಶ್ ಅವರಿಗೆ ಒಬ್ಬ ಮಗನಿದ್ದಾನೆ. 'ಮತದಾನ' ಸಿನಿಮಾದಲ್ಲಿ ಅಭಿನಯಿಸಿದ್ದಾಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ (ಪೋಷಕ ನಟ), ಆಪ್ತರಕ್ಷಕ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ (ಪೋಷಕ ನಟ), ಪೃಥ್ವಿ ಚಿತ್ರಕ್ಕೆ ( ಖಳನಾಯಕ) ಸುವರ್ಣ ಫಿಲ್ಮ್ ಪ್ರಶಸ್ತಿ 2011ಯನ್ನು ಪಡೆದುಕೊಂಡಿದ್ದಾರೆ.

ABOUT THE AUTHOR

...view details