ಕಳೆದ 2 ದಿನಗಳಿಂದ ಕೇರಳ ಮಣಪ್ಪುರಂನಲ್ಲಿ ಸ್ಫೋಟಕವಿರಿಸಿದ್ದ ಹಣ್ಣು ತಿಂದು ದುರಂತ ಸಾವನ್ನಪ್ಪಿದ ಗರ್ಭಿಣಿ ಆನೆ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಎಲ್ಲರೂ ಈ ಘಟನೆಗೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರು ಸೇರಿ ಸೆಲಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಇನ್ನು ನಿನ್ನೆಯಷ್ಟೇ ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್, ಆನೆ ಸಾವಿಗೆ ತಮ್ಮ ಟ್ಟಿಟ್ಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದರು, ನಟಿ, ಮಾಜಿ ಸಂಸದೆ ರಮ್ಯಾ ಆನೆ ಕೊಲೆಗೈದ ಪಾಪಿಗಳಿಗೆ ಶಿಕ್ಷೆ ಆಗಲು ಪಿಟಿಷನ್ಗೆ ಸಹಿ ಹಾಕುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಕಿರುತೆರೆ ನಟ-ನಟಿಯರೂ ಕೂಡಾ ಈ ಘಟನೆಯನ್ನು ಖಂಡಿಸಿದ್ದರು.