ಅನಿರುದ್ಧ್ ಅವರು ಕೊಡಗಿನ ಕುವರನ ಧಿರಿಸಿನಲ್ಲಿ ಮಿಂಚುತ್ತಿದ್ದಾರೆ. ಅಂದು ಸಾಹಸಸಿಂಹ ವಿಷ್ಣುವರ್ಧನ್ ಕೊಡಗಿನ ಕುವರನ ಉಡುಗೆ ಧರಿಸಿ ಸಿನಿರಂಗದಲ್ಲಿ ಮೆರೆದಂತೆ ಇಂದು ಅವರ ಅಳಿಯ ಅನಿರುದ್ಧ್ ಕೂಡಾ ಅದೇ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ.
ನಟ ಅನಿರುದ್ಧ್ ಹಾಗೂ ಮೇಘನಾ ಶೆಟ್ಟಿ ವಿಷ್ಣುವರ್ಧನ್ ಅವರು ಮುತ್ತಿನ ಹಾರ ಸಿನಿಮಾದಲ್ಲಿ ಮಡಿಕೇರಿ ಸಿಪಾಯಿಯ ಪಾತ್ರ ಮಾಡಿದ್ದರು. ಆಗ ಮಡಿಕೇರಿ ಕುವರನ ರೀತಿ ಪೋಷಾಕು ಧರಿಸಿದ್ದರು. ಇದೀಗ ಜೊತೆಜೊತೆಯಲಿ ಧಾರಾವಾಹಿ ತಂಡ ಈ ದೃಶ್ಯವನ್ನೇ ಮರುಸೃಷ್ಟಿ ಮಾಡುವ ಪ್ರಯತ್ನ ಮಾಡಿದೆ ಮತ್ತು ಅದರಲ್ಲಿ ಯಶಸ್ಸನ್ನು ಸಹ ಪಡೆದಿದ್ದಾರೆ.
ಆರ್ಯವರ್ಧನ್ ಅವರ ಹೊಸ ಅವತಾರವನ್ನು ಕಿರುತೆರೆ ಪ್ರಿಯರು ಮೆಚ್ಚಿಕೊಂಡಾಡಿದ್ದಾರೆ. ಎಥ್ನಿಕ್ ಡೇ ಸಲುವಾಗಿ ಹರ್ಷವರ್ಧನ್ ಆಫೀಸಿನಲ್ಲಿದ್ದವರಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಬರುವಂತೆ ಹೇಳಿದ್ದರು. ಅದರಂತೆ ಆರ್ಯವರ್ಧನ್ ಕೊಡಗಿನ ಕುವರನಾಗಿ ಮಿಂಚಿದರೆ ಅನು ಕೊಡಗಿನ ಹುಡುಗಿಯ ಪೋಷಾಕು ಧರಿಸಿದ್ದರು. ಉಳಿದಂತೆ ಮೀರಾ, ಝೇಂಡೆ ಎಲ್ಲರೂ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು.
ನಟ ಅನಿರುದ್ಧ್ ಹಾಗೂ ಮೇಘನಾ ಶೆಟ್ಟಿ
ಇದರ ಜೊತೆಗೆ ಕೊಡಗಿನ ಕುವರನ ವೇಷ ಧರಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ್ ಹಂಚಿಕೊಂಡಿದ್ದಾರೆ.