ಕರ್ನಾಟಕ

karnataka

ETV Bharat / sitara

ಕೊರೊನಾ ಬಗ್ಗೆ ಹೆದರುವ ಅಗತ್ಯವಿಲ್ಲ...ನಟ ಅನಿರುದ್ಧ್ ಸಲಹೆ - ಕೊರೊನಾ ವೈರಸ್ ಬಗ್ಗೆ ಅನಿರುದ್ಧ್ ಸಲಹೆ

ಆದಷ್ಟು ಬಿಸಿನೀರು ಕುಡಿಯಿರಿ, ಕೆಮ್ಮುವಾಗ ಹಾಗೂ ಸೀನುವಾಗ ಕರವಸ್ತ್ರ ಬಳಸಿ. ಯಾರನ್ನಾದರೂ ಭೇಟಿ ಮಾಡಿದಾಗ ಕೈ ಕುಲುಕದೆ ನಮಸ್ಕರಿಸಿ, ಇದೇ ನಮ್ಮ ಭಾರತೀಯ ಪದ್ಧತಿ, ಹೆಚ್ಚು ಜನಸಂದಣಿ ಇರುವ ಪ್ರದೇಶ ಅಥವಾ ಹೊರಗಡೆ ಹೋದಾಗ ಮಾಸ್ಕ್ ಧರಿಸಿ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅನಿರುದ್ಧ್​ ಮನವಿ ಮಾಡಿದ್ದಾರೆ.

Anirudh
ಅನಿರುದ್ಧ್

By

Published : Mar 11, 2020, 5:56 PM IST

ಈಗ ಎಲ್ಲೆಲ್ಲೂ ಕೊರೊನಾ ವೈರಸ್ ಬಗ್ಗೆಯೇ ಮಾತು. ಜನರು ಈ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದಾರೆ. ಯಾವ ಆಹಾರ ತಿನ್ನಬೇಕು, ಯಾವುದನ್ನು ಬಿಡಬೇಕು ಎಂದು ಚಿಂತಿಸುತ್ತಿರುವವರು ಕೆಲವರಾದರೆ, ಮತ್ತೆ ಕೆಲವರು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಭಯ ಪಡುತ್ತಿದ್ದಾರೆ.

ನಿನ್ನೆಯಷ್ಟೇ ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಮಾತನಾಡಿ, ಕೊರೊನಾ ಬಗ್ಗೆ ಯಾರೂ ಭಯ ಪಡಬೇಡಿ. ಕೊರೊನಾ ಭಯದಿಂದ ಕೆಲಸ ಬಿಟ್ಟು ಮನೆಯಲ್ಲೇ ಕೂರಲು ಸಾಧ್ಯವಿಲ್ಲ, ಆದಷ್ಟು ಜಾಗ್ರತೆಯಿಂದ ಇರಿ ಎಂದು ಧೈರ್ಯ ಹೇಳಿದ್ದರು. ಇದೀಗ 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಕೇಳುತ್ತಿದ್ದೇವೆ. ಆದರೆ ಯಾರೂ ಭಯಪಡುವ ಅಗತ್ಯವಿಲ್ಲ, ಕೆಮ್ಮು ,ನೆಗಡಿ, ಜ್ವರ ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ. ಆದಷ್ಟು ಬಿಸಿನೀರು ಕುಡಿಯಿರಿ, ಕೆಮ್ಮುವಾಗ ಹಾಗೂ ಸೀನುವಾಗ ಕರವಸ್ತ್ರ ಬಳಸಿ. ಯಾರನ್ನಾದರೂ ಭೇಟಿ ಮಾಡಿದಾಗ ಕೈ ಕುಲುಕದೆ ನಮಸ್ಕರಿಸಿ, ಇದೇ ನಮ್ಮ ಭಾರತೀಯ ಪದ್ಧತಿ, ಹೆಚ್ಚು ಜನಸಂದಣಿ ಇರುವ ಪ್ರದೇಶ ಅಥವಾ ಹೊರಗಡೆ ಹೋದಾಗ ಮಾಸ್ಕ್ ಧರಿಸಿ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅನಿರುದ್ಧ್​ ಮನವಿ ಮಾಡಿದ್ದಾರೆ. ಈ ಸಂದೇಶ ನೀಡಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ, ಅನಿರುದ್ಧ್​​​​ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ.

ABOUT THE AUTHOR

...view details