ಬೆಂಗಳೂರು:ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಗೆ ಸನ್ನಿಹಿತವಾಗಿದೆ.
ಕಿರುತೆರೆಯಲ್ಲಿ ಜ್ಯೂನಿಯರ್ ಜಲೀಲಾ... ಮಜಾ ಮನೆಯಲ್ಲಿ 'ಅಮರ್' ಹಾಜರ್ - undefined
ಪ್ರಮೋಷನ್ಗಾಗಿ ಅಮರ್ ಚಿತ್ರತಂಡ ಮಜಾ ಟಾಕೀಸ್ಗೆ ಬಂದಿದೆ. ನಾಯಕ ನಟ ಅಭಿಷೇಕ್ ಅಂಬರೀಶ್ , ತಾನ್ಯಾ ಹೋಪ್ ಸೇರಿದಂತೆ ಇಡೀ ಚಿತ್ರತಂಡ ಟಾಕಿಂಗ್ ಸ್ಟಾರ್ ಸೃಜನ್ ಜತೆ ಮಜಾ ಕ್ಷಣಗಳನ್ನು ಕಳೆದಿದೆ.
![ಕಿರುತೆರೆಯಲ್ಲಿ ಜ್ಯೂನಿಯರ್ ಜಲೀಲಾ... ಮಜಾ ಮನೆಯಲ್ಲಿ 'ಅಮರ್' ಹಾಜರ್](https://etvbharatimages.akamaized.net/etvbharat/prod-images/768-512-3375703-thumbnail-3x2-maja-takies.jpg)
ಇದೇ 31ರಂದು ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಚಿತ್ರತಂಡ ಕೂಡ ಭರ್ಜರಿ ಪ್ರಮೋಷನ್ ಕಾರ್ಯ ನಡೆಸುತ್ತಿದೆ. ಇದೀಗ ಚಿತ್ರದ ಪ್ರಚಾರಕ್ಕಾಗಿ ಕಿರುತೆರೆಗೆ ಬಂದಿದ್ದಾರೆ ಜ್ಯೂನಿಯರ್ ಜಲೀಲಾ ಅಭಿ.
ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ಹಾಗೂ ಕನ್ನಡ ಕೋಗಿಲೆಗಳು ಕಾರ್ಯಕ್ರಮದಲ್ಲಿ ಅಮರ್ ತಂಡ ಭಾಗಿಯಾಗಿದೆ. ಈಗಾಗಲೇ ಈ ಎಪಿಸೋಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇದೇ ಶನಿವಾರ-ಭಾನುವಾರ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಅಮರ್ ಸಿನಿಮಾದ ನಾಯಕ ಅಭಿಷೇಕ್, ನಾಯಕಿ ತಾನ್ಯಾ ಹೋಪ್, ನಟ ರಾಜ್ ದೀಪಕ್ ಶೆಟ್ಟಿ, ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸಂದೇಶ್, ಛಾಯಾಗ್ರಾಹಕ ಸತ್ಯ ಹೆಗ್ಡೆ ಭಾಗವಹಿಸಿದ್ದಾರೆ.