ಕರ್ನಾಟಕ

karnataka

ETV Bharat / sitara

ನೆಗೆಟಿವ್ ರೋಲ್ ಮೂಲಕ ಕಮಾಲ್ ಮಾಡಲು ಮುಂದಾದ ಅಭಿಷೇಕ್ ದಾಸ್ - ಅಭಿಷೇಕ್ ದಾಸ್

ತಮ್ಮ ನಟನೆಯ ಮೂಲಕ ಸೀರಿಯಲ್ ವೀಕ್ಷಕರ ಗಮನ ಸೆಳೆದಿರುವ ಅಭಿಷೇಕ್ ದಾಸ್ ಅವರು ಕಿರುತೆರೆಯ ಜೊತೆಗೆ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಅಭಿಷೇಕ್ ದಾಸ್
ಅಭಿಷೇಕ್ ದಾಸ್

By

Published : Feb 24, 2021, 11:40 AM IST

'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ತಮ್ಮ ವಿಕ್ರಾಂತ್ ವಸಿಷ್ಠ ಆಲಿಯಾಸ್ ವಿಕ್ಕಿಯಾಗಿ ಅಭಿನಯಿಸುತ್ತಿರುವ ಅಭಿಷೇಕ್ ದಾಸ್ ಅವರು ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಕಮಾಲ್ ಮಾಡಲು ಮುಂದಾಗಿದ್ದಾರೆ.

ಅಭಿಷೇಕ್ ದಾಸ್

'ಸರಯೂ' ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಅಭಿಷೇಕ್ ದಾಸ್ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ವಿಕ್ರಾಂತ್ ಆಗಿ ಬದಲಾದರು. ತಮ್ಮ ನಟನೆಯ ಮೂಲಕ ಸೀರಿಯಲ್ ವೀಕ್ಷಕರ ಗಮನ ಸೆಳೆದಿರುವ ಅಭಿಷೇಕ್ ಕಿರುತೆರೆಯ ಜೊತೆಗೆ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಅಭಿಷೇಕ್ ದಾಸ್

ಹೌದು, 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಭಿಷೇಕ್ ದಾಸ್ '14th Feb' ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಇದರ ಜೊತೆಗೆ ನಿತೀನ್ ಕೃಷ್ಣ ನಿರ್ದೇಶನದ 'ಹಾಸ್ಟೆಲ್ ಹುಡುಗರು' ಸಿನಿಮಾದಲ್ಲಿ ಸಹ ಅಭಿಷೇಕ್ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊಸಬರ ತಂಡ '14th ಫೆಬ್' ಸಿನಿಮಾ ಮಾಡುತ್ತಿದೆ. ಪ್ರದೀಪ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಿದು. ಶ್ರೀನಿವಾಸ್ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಕೂಡ ನಡೆಯುತ್ತಿದೆ. ಅಭಿಷೇಕ್ ದಾಸ್ ಅವರ ಲುಕ್ ಕೂಡ ರಿಲೀಸ್ ಆಗಿದೆ.

ಅಭಿಷೇಕ್ ದಾಸ್

ಅಷ್ಟೇ ಅಲ್ಲದೆ ಗುರುದತ್ ಗಾಣಿಗ ನಿರ್ದೇಶನದ 'ಬೆಂಗಳೂರು ಬಾಯ್ಸ್' ಸಿನಿಮಾದಲ್ಲಿ ನೆಗೆಟಿವ್ ರೋಲ್​ನಲ್ಲಿ ಅಭಿಷೇಕ್ ಬಣ್ಣ ಹಚ್ಚಲಿದ್ದಾರೆ. ಇಷ್ಟು ದಿನ ಲವರ್ ಬಾಯ್ ಅವತಾರದಲ್ಲಿ ವೀಕ್ಷಕರ ಮನ ಸೆಳೆದ ಅಭಿಷೇಕ್ ದಾಸ್ ಅನ್ನು ವಿಲನ್ ಅವತಾರದಲ್ಲಿ ವೀಕ್ಷಕರು ಮೆಚ್ಚಿಕೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ.

ABOUT THE AUTHOR

...view details