ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ತಮ್ಮನಾಗಿ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಅಭಿಷೇಕ್ ದಾಸ್ ತಮ್ಮ ಮನೋಜ್ಞ ನಟನೆಯ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದ್ದಾರೆ. ವಿಕ್ರಾಂತ್ ಆಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಅಭಿಷೇಕ್ ದಾಸ್ ಅವರ ಕುರಿತು ಒಂದು ವದಂತಿ ಕೇಳಿ ಬಂದಿತ್ತು.
ಅಭಿಷೇಕ್ ದಾಸ್ ಅವರಿಗೆ ಧಾರಾವಾಹಿಯಲ್ಲಿ ಆಕ್ಸಿಡೆಂಟ್ ಆಗಿದ್ದು, ಅವರು ಇನ್ಮುಂದೆ ಧಾರಾವಾಹಿಯಿಂದ ಹೊರ ಬರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಈ ವದಂತಿ ಕೇಳಿ ಗಟ್ಟಿಮೇಳ ವೀಕ್ಷಕರಿಗೆ ಕೊಂಚ ಬೇಸರವೂ ಆಗಿತ್ತು. ತಮ್ಮ ನೆಚ್ಚಿನ ನಟ ಇನ್ಮುಂದೆ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಬೇಸರಗೊಂಡಿದ್ದ ಜನರು, ಇದೀಗ ಅಭಿಷೇಕ್ ದಾಸ್ ಮಾತು ಕೇಳಿ ಸಮಾಧಾನಗೊಂಡಿದ್ದಾರೆ.