ಕರ್ನಾಟಕ

karnataka

ETV Bharat / sitara

ಮಾಸ್ಕ್​ ಧರಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ - ಮಾಸ್ಕ್ ಧರಿಸಿ ಮದುವೆಯಾದ ಚಂದನ್ , ಕವಿತಾ

ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಸಂದರ್ಭದಲ್ಲಿ ಇಬ್ಬರೂ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು.

ಮಾಸ್ಕ್ ಧರಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ
ಮಾಸ್ಕ್ ಧರಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ

By

Published : May 14, 2021, 7:19 PM IST

ಬೆಂಗಳೂರು: ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್​ಡೌನ್​​ ನಡುವೆಯೇ ಕೋವಿಡ್ ನಿಯಮ ಪಾಲಿಸಿ ಇಂದು ಹಸೆಮಣೆ ಏರಿದ್ದಾರೆ. ಮದುವೆಯಲ್ಲಿ ಕೇವಲ 40 ಮಂದಿ ಮಾತ್ರ ಇರಬೇಕೆಂಬ ಆದೇಶವಿದ್ದು, ಅದರಂತೆ ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ

ಏಪ್ರಿಲ್‌ 1 ರಂದು ಈ ಜೋಡಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿತ್ತು. ಇದೀಗ ಸರಳವಾಗಿ ಚಂದನ್‌ ಮತ್ತು ಕವಿತಾ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಚಂದನ್ ಮತ್ತು ಕವಿತಾ ಮಾಸ್ಕ್‌ ಧರಿಸಿಯೇ ಮದುವೆಯಾಗಿದ್ದು ಮತ್ತೊಂದು ವಿಶೇಷ.

ಮಾಸ್ಕ್ ಧರಿಸಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ
'ಮನೆ ಮದುವೆ, ಮದುವೆ ಮನೆ' ಗ್ಲೋರಿಯಸ್​ ಆಗಿಲ್ಲ, ಆದರೆ, ಸಂತಸದಿಂದ ತುಂಬಿದೆ ಎಂದು ಚಂದನ್ ತಮ್ಮ ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ನವಜೋಡಿಗಳ ಫೋಟೋಗಳು ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ

ಇದನ್ನೂ ಓದಿ: ರಕ್ತದಾನದ ಮೂಲಕ ನಟಿ ರಾಗಿಣಿ ಜಾಗೃತಿ.. ಹಸಿದವರಿಗೆ ಅನ್ನ ನೀಡಿಯೂ ತುಪ್ಪದ ಬೆಡಗಿ ಸೇವೆ..

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಚಂದನ್​ ಕುಮಾರ್​ ಮತ್ತು ಕವಿತಾ ಜೋಡಿಯಾಗಿ ನಟಿಸಿ ಜನಮನ ಗೆದ್ದಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಜೋಡಿ

ABOUT THE AUTHOR

...view details