ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್ ಸೀಸನ್​ 8: ಈ ವಾರ ನಾಮೀನೇಟ್ ಆದ ಐವರು ಯಾರು! - Bigg Boss latest update

ಬಿಗ್ ಬಾಸ್ ಸೀಸನ್ 8 ಈಗಾಗಲೇ ಪ್ರಾರಂಭಗೊಂಡಿದ್ದು, ಮೊದಲ ವಾರ 5 ಮಂದಿ ಈ ವಾರ ಮನೆಯಿಂದ ಹೊರಹೋಗುವುದಕ್ಕೆ ನಾಮಿನೇಟ್​ ಆಗಿದ್ದಾರೆ.

Bigg Boss season 8
ಬಿಗ್​ಬಾಸ್ ಸೀಸನ್​ 8

By

Published : Mar 2, 2021, 10:06 AM IST

ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಮನೆ ಪ್ರವೇಶಿಸಿ ಒಂದು‌ದಿನ ಕಳೆದಿದ್ದಾರೆ‌. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಐವರು ನಾಮಿನೇಟ್ ಆಗಿದ್ದಾರೆ. ಮೊದಲ ದಿನ ಎರಡು ಟಾಸ್ಕ್ ಹಾಗೂ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ನಟಿ ನಿಧಿ ಸುಬ್ಬಯ್ಯ, ನಿರ್ಮಲಾ, ಧನುಶ್ರೀ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ನಾಮೀನೆಟ್ ಆಗಿದ್ದಾರೆ.

ಕ್ಯಾಪ್ಟನ್ ಆಗಿ ಬ್ರೊ ಗೌಡ ಅಲಿಯಾಸ್ ಶಮಂತ್ ಆಯ್ಕೆಯಾಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಹಿರಿಯ ಸದಸ್ಯ ಶಂಕರ್ ಅಶ್ವಥ್ ಅವರಿಗೆ ಅತಿ ಹೆಚ್ಚು ಮತಗಳು ಬಿದ್ದಿದ್ದವು. ಬಿಗ್ ಬಾಸ್ ಆದೇಶದಂತೆ ಕ್ಯಾಪ್ಟನ್​ಗೆ ಒಬ್ಬ ಸದಸ್ಯರನ್ನು ಈ ವಾರ ಎಲಿಮಿನೇಷನ್​ನಿಂದ ಉಳಿಸುವಂತೆ ಹೇಳಿದಾಗ, ಹಿರಿಯರು, ಜ್ಞಾನಿಗಳಾಗಿರುವ ಶಂಕರ್ ಅವರನ್ನು ಉಳಿಸುತ್ತೇನೆ ಎಂದು ಶಮಂತ್ ತಿಳಿಸಿದರು.

ಹಿಂದಿನ ದಿನ ರಾತ್ರಿ, ಮನೆಗೆ ಎಂಟ್ರಿ ಕೊಡುತ್ತಲೇ ಎಲ್ಲವನ್ನೂ ಗಮನಿಸುತ್ತಿದ್ದ ನಟಿ ದಿವ್ಯಾ ಸುರೇಶ್, ಹಾಸಿಗೆಗಳನ್ನು ಲೆಕ್ಕ ಹಾಕಿ, ಒಂದು ಹಾಸಿಗೆಯಲ್ಲಿ ಇಬ್ಬರು ಮಲಗಿಕೊಳ್ಳಬೇಕು ಎಂದು ಶಮಂತ್ ಬಳಿ ಹೇಳುತ್ತಾರೆ. 'ಈ ಸಲ ಮನೆ ತುಂಬ ಚೆನ್ನಾಗಿದೆ ಅಲ್ವಾ? ಕಲರ್ ತುಂಬಾ ಚೆನ್ನಾಗಿದೆ. ಹೆಚ್ಚು ಗ್ರೀನ್ ಬಣ್ಣ ಬಳಸಿರುವುದರಿಂದ ಪಾಸಿಟಿವ್ ಎನರ್ಜಿ ಬರುತ್ತಿದೆ' ಎಂದು ಬ್ರೋ ಗೌಡ ಬಳಿ ಹೇಳಿಕೊಂಡಿದ್ದಾರೆ.

ಮಲಗುವುದಕ್ಕೆ ಒಟ್ಟು ಎಂಟು ಹಾಸಿಗೆಗಳು ಇವೆ. ಅದರಲ್ಲಿ ಒಂದರಲ್ಲಿ ಇಬ್ಬರಂತೆ 16 ಜನ ಮಲಗಿಕೊಳ್ಳಬೇಕು. ಒಬ್ಬರಿಗೆ ಮಾತ್ರ ವಿಶೇಷ ಕೋಣೆ ಸಿಗಲಿದೆ. ಯಾರು ವಾರದ ಕ್ಯಾಪ್ಟನ್ ಆಗಿರುತ್ತಾರೋ, ಅವರಿಗೆ ಮಾತ್ರ ಆ ಕೋಣೆ ಸಿಗಲಿದೆ. ಹಾಗಾಗಿ, ಮನೆಯ ಸದಸ್ಯರಿಗೆ ಈ ಕ್ಯಾಪ್ಟನ್‌ಶಿಪ್ ಮೇಲೆ ಕಣ್ಣು ಬಿದ್ದಿತ್ತು. ಅಂತಿಮವಾಗಿ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶಮಂತ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ.

ABOUT THE AUTHOR

...view details