ಕರ್ನಾಟಕ

karnataka

ETV Bharat / sitara

ಅಪರೂಪದ 'ಅಪೂರ್ವ ಸಗೋಧರ್ಗಲ್'... ಶಾರುಖ್​ ಮುಂಚೆನೇ ಕುಬ್ಜನಾಗಿದ್ದರು ಕಮಲ್ ​ - ಕಮಲ್

'ಅಪೂರ್ವ ಸಗೋಧರ್ಗಲ್' (ಏಪ್ರಿಲ್​ 14-1989) ಚಿತ್ರಕ್ಕೆ ಮೂರು ದಶಕಗಳು ತುಂಬಿವೆ. ಕುಬ್ಜನ ಪಾತ್ರದಲ್ಲಿ ಕಮಲ್ ಅಭಿನಯ ಚಿತ್ರರಂಗಕ್ಕೆ ಬೆರಗು ಮೂಡಿಸಿತ್ತು.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Apr 16, 2019, 8:13 PM IST

'ಅಪೂರ್ವ ಸಗೋಧರ್ಗಲ್'​ ನಟ ಕಮಲ್ ಹಾಸನ್ ಕೆರಿಯರ್​​ನಲ್ಲಿ ವಿಭಿನ್ನವಾದ ಸಿನಿಮಾ. ಕಮಲ್​ ಅಭಿನಯ ಕೌಶಲ್ಯಕ್ಕೆ ಮತ್ತೊಂದು ಹೊಳಪು ನೀಡಿದ ಅಪರೂಪದ ಚಿತ್ರ. ​

ಹೌದು, ಕಮಲ್​ 'ಅಪೂರ್ವ ಸಗೋಧರ್ಗಲ್'​ ಚಿತ್ರದಲ್ಲಿ ಮೂರು ಶೇಡ್​ನಲ್ಲಿ ಅಭಿನಯಿಸಿದ್ದರು. ಅವಳಿ ಜವಳಿ ಸಹೋದರರು ಹಾಗೂ ಇವರ ತಂದೆಯ ಪಾತ್ರಕ್ಕೆ ಇವರೊಬ್ಬರೇ ಬಣ್ಣ ಹಚ್ಚಿದ್ದರು. 80ರ ದಶಕದಲ್ಲಿ ಬ್ಲಾಕ್​ಬಸ್ಟರ್​ ಚಿತ್ರವಾಗಿ 'ಅಪೂರ್ವ ಸಗೋಧರ್ಗಲ್'​ ದಾಖಲೆ ಬರೆದಿತ್ತು. ಕಥೆಯ ಜತೆಗೆ ಈ ಚಿತ್ರದಲ್ಲಿ ಪ್ರಮುಖ ಹೈಲೈಟ್​ ನಟ ಕಮಲ್ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಟ್ವಿನ್ಸ್​ ಸಹೋದರರ ಪೈಕಿ ಅಪ್ಪು ಹೆಸರಿನ ಪಾತ್ರದಲ್ಲಿ ಅವರು ಕುಳ್ಳನ ಪಾತ್ರ ನಿಭಾಯಿಸಿದ್ದರು. ಬೆಳ್ಳಿ ಪರದೆಯ ಮೇಲೆ ಕುಬ್ಜನ ಪಾತ್ರ ಕಮಲ್ ಅಭಿಮಾನಿಗಳಿಗೆ ಮೋಡಿ ಮಾಡಿತ್ತು. ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡು ಸಿನಿಮಾ ನೋಡಿ, ಇವರ ಅಭಿನಯಕ್ಕೆ ಭೇಷ್​ ಭೇಷ್​ ಎಂದಿದ್ದರು.

ನಂತರದ ಸಿನಿಮಾಗಳಲ್ಲಿ ಕಮಲ್ ಮತ್ತೆ ಅಂತಹ ಪಾತ್ರದಲ್ಲಿ ಅಭಿನಯಿಸಲಿಲ್ಲ. ಬಹುಶಃ ಶಾರುಖ್ ಅವರನ್ನು ಹೊರತು ಪಡಿಸಿ ಬೇರಾವ ನಟರು ಈ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಕಳೆದ ವರ್ಷ ತೆರೆಕಂಡಿದ್ದ ಜೀರೋ ಚಿತ್ರದಲ್ಲಿ ಈ ಚಾಲೆಂಜಿಂಗ್ ಪಾತ್ರ ನಿಭಾಯಿಸಿದ್ದರು ಬಾಲಿವುಡ್ ಬಾದ್​ಷಾ. ಆದರೆ, ಕುಬ್ಜನ ಪಾತ್ರದಲ್ಲಿ ಶಾರುಖ್ ಹಾಗೂ ಕಮಲ್ ಅಭಿನಯಕ್ಕೆ ಅಜಗಜಾಂತರ ವ್ಯತ್ಯಾಸ ಕಂಡುಹಿಡಿದರು ಪ್ರೇಕ್ಷಕರು.

ಈಗೆಲ್ಲ ತಂತ್ರಜ್ಞಾನ ಬೆಳೆದಿದೆ. ಸಿಜೆ ವರ್ಕ್​ ಮಾಡಿ ಯಾವದೇ ಪಾತ್ರವನ್ನು ಹೇಗೆ ಬೇಕಾದ್ರು ತೋರಿಸಬಹುದು. ಆದರೆ, ಅಂದು ಈ ಮಟ್ಟಿಗಿನ ತಾಂತ್ರಿಕತೆ ಸ್ಟ್ರಾಂಗ್ ಇರಲಿಲ್ಲ. ಆದ್ದರಿಂದ ಕುಬ್ಜನ ಪಾತ್ರ ಒಂದು ಸವಾಲು ಆಗಿತ್ತು. ಎಷ್ಟೇ ಕಷ್ಟವಾದ್ರೂ ಹಿಂದೆಸರಿಯದ ಕಮಲ್​, ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದ್ದರು. ಹಗಲು ರಾತ್ರಿ ಎನ್ನದೇ ಪರಿಶ್ರಮ ಪಟ್ಟು ಪಾತ್ರ ನಿಭಾಯಿಸಿದ್ದರು. ಚಿತ್ರೀಕರಣದ ನಂತರ ತಮ್ಮ ಮಂಡಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ಅದೇನೆ ಇರಲಿ, ಈ 'ಅಪೂರ್ವ ಸಗೋಧರ್ಗಲ್' ತೆರೆ ಕಂಡು ಮೊನ್ನೆಗೆ (ಏಪ್ರಿಲ್​ 14-1989) ಮೂವತ್ತು ವರ್ಷಗಳು ಕಳೆಯಿತು. ಈ ಪ್ರಯೋಗಾತ್ಮಕ ಚಿತ್ರಕ್ಕೆ ಜೀವ ತುಂಬಿದ ಹೆಮ್ಮೆ ಇಂದಿಗೂ ಕೂಡ ಕಮಲ್ ಕಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತೆ.

ABOUT THE AUTHOR

...view details