ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ 'ಕೆಜಿಎಫ್- 2' ಸಿನಿಮಾ ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಭಾರತೀಯ ಚಿತ್ರರಂಗ ಮಾತ್ರವಲ್ಲದೆ ವಿಶ್ವದಾದ್ಯಂತ ಹವಾ ಸೃಷ್ಟಿಸಿರುವ ಕನ್ನಡದ ಹೈ ವೋಲ್ಟೇಜ್ ಚಿತ್ರ 'ಕೆಜಿಎಫ್ ಚಾಪ್ಟರ್- 2' ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಅಷ್ಟೇ ಅಲ್ಲದೆ ಅತ್ಯಂತ ಕಡಿಮೆ ಸಮಯದಲ್ಲಿ ಕೋಟ್ಯಂತರ ಜನ ನೋಡಿದ ಟೀಸರ್ ಎಂಬ ಹೆಗ್ಗಳಿಕೆಗೆ ಸಹ ಪಾತ್ರವಾಗಿತ್ತು. ಇದೀಗ ಮತ್ತೊಂದು ಹೆಮ್ಮೆಯ ವಿಷಯವೆಂದ್ರೆ ಯೂಟ್ಯೂಬ್‌ನಲ್ಲಿ ಈ ಟೀಸರ್ ಅನ್ನು ಇದುವರೆಗೆ 200 ಮಿಲಿಯನ್ ಜನ ವೀಕ್ಷಿಸಿದ್ದಾರೆ.
'ಕೆಜಿಎಫ್ ಚಾಪ್ಟರ್-2' ಚಿತ್ರದ ಟೀಸರ್ ವೀಕ್ಷಿಸಿದ 200 ಮಿಲಿಯನ್ ಜನ ಈ ದಾಖಲೆಯನ್ನು 'ಕೆಜಿಎಫ್ ಚಾಪ್ಟರ್- 2' ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂ ಹಂಚಿಕೊಂಡಿದೆ. ಭಾರತೀಯ ಚಿತ್ರರಂಗದಲ್ಲೇ 'ಕೆಜಿಎಫ್ ಚಾಪ್ಟರ್-2' ಚಿತ್ರದ ಟೀಸರ್ ಅನ್ನು 8.4 ಮಿಲಿಯನ್ ಜನ ಲೈಕ್ ಮಾಡಿದ್ದು, 1.1 ಮಿಲಿಯನ್ ಜನ ಕಾಮೆಂಟ್ ಮಾಡಿದ್ದಾರೆ. 1 ಬಿಲಿಯನ್ ಜನ ಈ ಟೀಸರ್ ಅದ್ಭುತವಾಗಿದೆ ಅಂತಾ ಮೆಚ್ಚಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್- 2 ಚಿತ್ರ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದೇ ಅಂದರೆ, ಜುಲೈ 16 ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ಡೇಟ್ ಫಿಕ್ಸ್ ಮಾಡಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ 'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.