ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್ ಸೀಸನ್ 8 ಪುನಾರಂಭ: 12 ನೇ ಸ್ಪರ್ಧಿ ಇವರೇನಾ? - ಬಿಗ್​ಬಾಸ್ ಸೀಸನ್ 8,

ಬಿಗ್​ಬಾಸ್ ಮನೆಗೆ ಈ ಬಾರಿ 12 ಮಂದಿ ಪ್ರವೇಶಿಸಲಿದ್ದಾರೆ ಎಂದು ಕಲರ್ಸ್​ ಚಾನಲ್​ನ ಮೂಲಗಳು ತಿಳಿಸಿದ್ದವು. ಆ 12 ನೇ ಸ್ಪರ್ಧಿ ರಾಜೀವ್ ಹುನು ಆಗಲಿದ್ದಾರೆಯೇ ಎಂಬ ಅನುಮಾನ ಮೂಡಿದೆ.

bigg-boss
12 ನೇ ಸ್ಪರ್ಧಿ

By

Published : Jun 20, 2021, 6:57 PM IST

ಸುದೀಪ್ ಅನುಪಸ್ಥಿತಿಯಲ್ಲಿ ಬಿಗ್​ಬಾಸ್ ಮನೆಯಿಂದ ಹೊರ ಬಂದಿದ್ದ ಸ್ಪರ್ಧಿ ರಾಜೀವ್ ಹುನು ಮತ್ತೆ ಬಿಗ್​ಬಾಸ್ ಮನೆಯೊಳಗೆ ಪ್ರವೇಶಿಸಲಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಲಾಕ್​ಡೌನ್​ನಿಂದ ರದ್ದಾಗಿದ್ದ ಬಿಗ್​ಬಾಸ್ ಇದೀಗ ಮತ್ತೆ ಆರಂಭವಾಗುತ್ತಿದೆ.

ಈ ಬಾರಿ ಹನ್ನೊಂದು ಮಂದಿ ಬದಲು 12 ಮಂದಿ ಪ್ರವೇಶಿಸಲಿದ್ದಾರೆ ಎಂದು ಕಲರ್ಸ್​ ಚಾನಲ್​ನ ಮೂಲಗಳು ತಿಳಿಸಿದ್ದವು. ಆದರೆ 11 ಮಂದಿ ಹೊರಬಂದಿದ್ದು, 12ನೇ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.

ಹೌದು, ನಟ ಸುದೀಪ್ ಅವರು ಅನಾರೋಗ್ಯದ ಕಾರಣ ವಾರಾಂತ್ಯ ಕಾರ್ಯಕ್ರಮದಲ್ಲಿ ಗೈರಾದ ಸಂದರ್ಭದಲ್ಲಿ ರಾಜೀವ್ ಮನೆಯಿಂದ ಹೊರ ಬಂದಿದ್ದರು. ಆದರೆ ಅಭಿಮಾನಿಗಳು ರಾಜೇಶ್ ಅವರ ಎಲಿಮಿನೇಷನ್ ಅನ್ನು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ರಾಜೀವ್ ಅವರನ್ನು ಮನೆಗೆ ಮತ್ತೆ ಕಳುಹಿಸಬೇಕೆಂದು ಅಭಿಮಾನಿಗಳಿಂದ ಒತ್ತಾಯ ಕೇಳಿಬಂದಿದೆ.

ಹೀಗಾಗಿ ರಾಜೀವ್​ ಮತ್ತೆ ಮನೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ #WeWantKingRajeevBackToBBK8 ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ. ಹೀಗಾಗಿ 12 ಮಂದಿಯಲ್ಲಿ ರಾಜೀವ್ ಕೂಡ ಒಬ್ಬರಾ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ABOUT THE AUTHOR

...view details