ಕರ್ನಾಟಕ

karnataka

ETV Bharat / sitara

ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ? - Shrinidhi shetty engagement

'ಕೆಜಿಎಫ್’ ಚಿತ್ರದ ನಟಿ ಶ್ರೀನಿಧಿ ಶೆಟ್ಟಿಯವರ ಕುರಿತು ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಶ್ರೀನಿಧಿಯವರ ನಿಶ್ಚಿತಾರ್ಥ ಆಗಿದೆ ಎಂದು ದೂರವಾಣಿ ಕರೆಗಳು ಬರುತ್ತಿದ್ದು, ಇದು ಸತ್ಯವೋ, ಸುಳ್ಳೋ ಎನ್ನುವ ಕುರಿತು ಇಲ್ಲಿದೆ ನೋಡಿ ಮಾಹಿತಿ.

Shrinidhi shetty
Shrinidhi shetty

By

Published : Jun 27, 2020, 11:30 AM IST

ನಿನ್ನೆಯಿಂದ 'ಕೆಜಿಎಫ್’ ಚಿತ್ರದ ನಟಿ ಶ್ರೀನಿಧಿ ಶೆಟ್ಟಿಯವರ ಕುರಿತು ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಹೌದು, ಶ್ರೀನಿಧಿಯವರ ನಿಶ್ಚಿತಾರ್ಥ ಆಗಿದೆ ಎಂದು ದೂರವಾಣಿ ಕರೆಗಳು ಬರುತ್ತಿದ್ದು, ಇದು ಸತ್ಯವೋ, ಸುಳ್ಳೋ ಎನ್ನುವ ಕುರಿತು ಇಲ್ಲಿದೆ ನೋಡಿ ಮಾಹಿತಿ.

ನಿಜವಾದ ವಿಚಾರ ಏನಪ್ಪಾ ಅಂದ್ರೆ ಈ ಫ್ಯಾನ್ ಇಂಡಿಯಾ ನಟಿ ತಮಿಳಿನ ಸೂಪರ್ ಸ್ಟಾರ್ ವಿಕ್ರಮ್ ಅಭಿನಯದ ‘ಕೋಬ್ರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ನಿಶ್ಚಿತಾರ್ಥದ ಹಾಡು ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡವೂ ಸಹ ವಿಭಿನ್ನ ಯೋಚನೆ ಮಾಡಿ ನಿಶ್ಚಿತಾರ್ಥ ಹಾಡಿನ ಚಿತ್ರೀಕರಣಕ್ಕೆ ಇನ್ವಿಟೇಷನ್ ಸಿದ್ಧಪಡಿಸಿದೆ.

ನಿಶ್ಚಿತಾರ್ಥ ಪತ್ರಿಕೆ

ಈ ಇನ್ವಿಟೇಷನ್‌ನಲ್ಲಿರುವ ಫೋಟೋ ಹಾಗೂ ವಿವರ ನಿಜ ಜೀವನದಲ್ಲಿ ನಡೆಯುವ ನಿಶ್ಚಿತಾರ್ಥದ ರೀತಿಯಲ್ಲೇ ಹೋಲಿಕೆ ತರ ಇದೆ. ಜೂನ್ 29, ಸಂಜೆ 5 ಗಂಟೆಗೆ ನಿಶ್ಚಿತಾರ್ಥದ ವೇಳೆ ನಿಗದಿಪಡಿಸಲಾಗಿದೆ. ಆದರೆ ಅದು ಹಾಡಿನ ಚಿತ್ರೀಕರಣ ಎಂದು ಆಮೇಲೆ ತಿಳಿದಿದೆ.

ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ತಮಿಳು ‘ಕೋಬ್ರಾ’ ಸಿನಿಮಾದ ತುಂಬಿ ತುಲ್ಲಾಳ್ ಎನ್ನುವ ಹಾಡು ಸೋನಿ ಮ್ಯೂಜಿಕ್ ನಲ್ಲಿ ಸೋಮವಾರ ಸಂಜೆ 5 ಘಂಟೆಗೆ ಬಿಡುಗಡೆ ಆಗಲಿದೆ. ವಿವೇಕ್ ಈ ಹಾಡಿನ ರಚನೆ ಮಾಡಿದ್ದಾರೆ.

ವಿಕ್ರಮ್, ಶ್ರೀನಿಧಿ ಶೆಟ್ಟಿ ಅಭಿನಯದ ‘ಕೋಬ್ರಾ’ ಸಿನಿಮಾ, ಅಜಯ್ ನಿರ್ದೇಶನದಲ್ಲಿ ಈಗಾಗಲೇ 70% ಚಿತ್ರೀಕರಣ ಮುಗಿಸಿಕೊಂಡಿದೆ. ಲಾಕ್ ಡೌನ್ ಸಡಿಲ ಆಗುತ್ತಾ ಇದ್ದಂತೆ ಉಳಿದ ಭಾಗದ ಚಿತ್ರೀಕರಣ ಸಹ ಆಗಲಿದೆ.

‘ಕೋಬ್ರಾ’ ತಮಿಳು ಸಿನಿಮಾದಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್, ಮಿಯಾ ಜಾರ್ಜ್, ಕೆ.ಎಸ್.ರವಿ ಕುಮಾರ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

ವಿಕ್ರಮ್ ಅಭಿಮಾನಿಗಳು ‘ಕೋಬ್ರಾ’ ಚಿತ್ರದ ಮೊದಲ ಹಾಡಿನ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಲಲಿತ್ ಕುಮಾರ್ ಅವರ ‘ಸೆವೆನ್ ಸ್ಕ್ರೀನ್ ಸ್ಟುಡಿಯೋ’ ಅಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ABOUT THE AUTHOR

...view details