ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಮೇಕಿಂಗ್ ಹಾಗೂ ಡಾಲಿ ಧನಂಜಯ್ ಲುಕ್ನಿಂದಲೇ ಗಾಂಧಿನಗರದಲ್ಲಿ ಕುತೂಹಲ ಹುಟ್ಟಿಸಿರೋ ಈ ಚಿತ್ರ ಶಿವರಾತ್ರಿ ಹಬ್ಬದ ಪ್ರಯುಕ್ತ ನಾಳೆ 300ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಡಾಲಿ ಧನಂಜಯ್ ಅಂತಾನೇ ನೇಮ್ ಆಗಿರುವ ಧನಂಜಯ್ ಸಿನಿಮಾವೊಂದು ಮೊದಲ ಬಾರಿಗೆ ಮುಂಜಾನೆ ಪ್ರದರ್ಶನ ಕಾಣುತ್ತಿದೆ. ಧನಂಜಯ ಫ್ಯಾನ್ಸ್ ಒತ್ತಾಯದ ಮೇರೆಗೆ ಜೆಪಿ ನಗರ ಸಿದ್ದೇಶ್ವರ ಥಿಯೇಟರ್ನಲ್ಲಿ ನಾಳೆ ಬೆಳ್ಳಗ್ಗೆ 7ಗಂಟೆಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದೆ.