ಕರ್ನಾಟಕ

karnataka

ETV Bharat / sitara

ತ್ರಿಮೂರ್ತಿ ದೇವಸ್ಥಾನದಲ್ಲಿ ಸೆಟ್ಟೇರಿದ 'ವಿಧಿಬರಹ‌' ಸಿನಿಮಾ - Kannada new cinema vidhi baraha

ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿರೋ ಈ ಸಮಯದಲ್ಲಿ 'ವಿಧಿಬರಹ' ಸಿನಿಮಾ ಕನಕಪುರ ರಸ್ತೆಯಲ್ಲಿರುವ ತ್ರಿಮೂರ್ತಿ ದೇವಸ್ಥಾನದಲ್ಲಿ ಸೆಟ್ಟೇರಿದೆ. ‌

vidhi baraha film
vidhi baraha film

By

Published : Oct 19, 2020, 1:05 PM IST

ಚಿತ್ರಮಂದಿರಗಳು ಓಪನ್ ಆದ ಬೆನ್ನಲ್ಲೇ ಗಾಂಧಿನಗರಲ್ಲಿ ಸಿನಿಮಾ ರಂಗದ ಚಟುವಟಿಕೆಗಳು ಶುರುವಾಗಿವೆ. ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿರೋ ಈ ಸಮಯದಲ್ಲಿ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಪ್ಪು ಸಿನಿಮಾದ ಹಾಡಿನ ಪದವೊಂದು ಇದೀಗ ಸಿನಿಮಾವಾಗುತ್ತಿದೆ. ಹೌದು, 'ವಿಧಿಬರಹ' ಎಂಬ ಹೆಸರಿನ ಸಿನಿಮಾ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

ಯುವ ನಟ ಶೋಭ್ ರಾಜ್, ಲಯ ಕೋಕಿಲ, ರಾಜೇಶ್ ನಟರಂಗ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪದ್ಮಜ ಮುಖ್ಯ ಭೂಮಿಕೆಯಲ್ಲಿರೋ 'ವಿಧಿಬರಹ' ಸಿನಿಮಾ ಕನಕಪುರ ರಸ್ತೆಯಲ್ಲಿರುವ ತ್ರಿಮೂರ್ತಿ ದೇವಸ್ಥಾನದಲ್ಲಿ ಸೆಟ್ಟೇರಿದೆ. ‌

ಎಲ್ಲರ ಜೀವನದಲ್ಲೂ ವಿಧಿ ಒಂದಲ್ಲಾ ಒಂದು ರೀತಿ ಆಟವಾಡುತ್ತದೆ ಎಂಬ ಕಥಾ ಹಂದರವನ್ನು 'ವಿಧಿಬರಹ' ಚಿತ್ರ ಒಳಗೊಂಡಿದ್ದು, ಮಂಜುನಾಥ್ ನಿರ್ಮಾಪಕರಾಗಿದ್ದಾರೆ. ರಘುವರ್ಮ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ, ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿ ಆರು ಹಾಡುಗಳಿದ್ದು, ಲಯ ಕೋಕಿಲ ಸಂಗೀತ ನೀಡುತ್ತಿದ್ದಾರೆ.

ಎಸ್.ಎಲ್.ವಿ‌ ರವಿ ಛಾಯಾಗ್ರಹಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ದೀಪ ಕ್ರಿಯೇಷನ್ಸ್ ಲಾಂಛನದಲ್ಲಿ ಮಂಜುನಾಥ್ ನಿರ್ಮಿಸುತ್ತಿರುವ ಈ ಚಿತ್ರ ಅಕ್ಟೋಬರ್ 30ರಿಂದ ಬೆಂಗಳೂರು, ಶಿವಮೊಗ್ಗ ಸೇರಿದಂತೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.‌

ABOUT THE AUTHOR

...view details