ಕರ್ನಾಟಕ

karnataka

ನಷ್ಟದಲ್ಲಿ ಚಿತ್ರೋದ್ಯಮ: ಹೊಸ ಬೇಡಿಕೆ ಮುಂದಿಟ್ಟ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ

By

Published : Oct 14, 2020, 4:27 PM IST

ಯು ಎಫ್ ಒ ಹಾಗೂ ಕ್ಯೂಬ್ ಸಂಸ್ಥೆಗಳು ಚಿತ್ರಗಳನ್ನು ಆಯಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಎರಡು ವರ್ಷ ಉಚಿತವಾಗಿ ಬಾಡಿಗೆ ಪಡೆಯದೇ ನಿರ್ಮಾಪಕರ ಸಂಕಷ್ಟಕ್ಕೆ ಸಹಕರಿಸಬೇಕು ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಗ್ರಹಿಸಿದೆ.

 Kannada Producers Association
Kannada Producers Association

ಕೊರೊನಾ ಹಿನ್ನೆಲೆ ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರಗಳು ಸ್ತಬ್ಧಗೊಂಡಂತೆ ಚಿತ್ರೋದ್ಯಮವೂ ತನ್ನ ಕಾರ್ಯಚಟುವಟಿಕೆಗಳನ್ನು ಬಂದ್‌ ಮಾಡಿತ್ತು. ಇದೀಗ ಥಿಯೇಟರ್ ಗಳನ್ನು ಮತ್ತೆ ತೆರೆಯಲಾಗುತ್ತಿದೆ ಎನ್ನುವ ವೇಳೆಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಹೊಸ ಬೇಡಿಕೆಯೊಂದನ್ನು ಮುಂದಿಟ್ಟಿದೆ.

ಹೌದು, ಯು ಎಫ್ ಒ ಹಾಗೂ ಕ್ಯೂಬ್ ಸಂಸ್ಥೆಗಳು ಚಿತ್ರಗಳನ್ನು ಆಯಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಎರಡು ವರ್ಷ ಉಚಿತವಾಗಿ ಬಾಡಿಗೆ ಪಡೆಯದೇ ನಿರ್ಮಾಪಕರ ಸಂಕಷ್ಟಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದೆ.

ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದೆರೆಡು ಸಭೆ ಮಾಡಿದೆ. ಆದರೆ ಈ ಕುರಿತು ಮುಂಬೈಯಿಂದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ವಿಚಾರದಲ್ಲಿ ಕನ್ನಡ ನಿರ್ಮಾಪಕರಿಗೆ ಸಹಕಾರ ಸಿಗದೇ ಇದ್ದರೆ ಕರ್ನಾಟಕ ಸರ್ಕಾರದ ಸಹಾಯ ಕೋರಲಾಗುವುದು ಎಂದು ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಮೊನ್ನೆ ನಡೆದ ಕನ್ನಡ ನಿರ್ಮಾಪಕರ ಸಂಘದ ಸಭೆಯಲ್ಲಿ ಈ ಬೇಡಿಕೆ ಇಡಲಾಗಿದ್ದು, ಈ ಸಭೆಯಲ್ಲಿ ನಿರ್ಮಾಪಕರುಗಳಾದ ಕೆ ಮಂಜು, ಎ ಗಣೇಶ್, ಎನ್ ಎಂ ಸುರೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details