ಕರ್ನಾಟಕ

karnataka

ETV Bharat / sitara

ಶೀಘ್ರದಲ್ಲೇ ಪುನರಾರಂಭವಾಗಲಿದೆ 'ಹಾಡು ಕರ್ನಾಟಕ' - ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಾಡು ಕರ್ನಾಟಕ ಹಾಡು

ಲಾಕ್​​ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ 'ಹಾಡು ಕರ್ನಾಟಕ' ಶೋ ಮತ್ತೊಮ್ಮೆ ಮನರಂಜನೆ ನೀಡಲು ಬರುತ್ತಿದ್ದು, ಸಂಗೀತಪ್ರಿಯರಿಗೆ ಮಗದೊಮ್ಮೆ ಗಾನಸುಧೆಯನ್ನು ಕೇಳುವ ಸುವರ್ಣವಕಾಶ ದೊರೆಯಲಿದೆ.

ಹಾಡು ಕರ್ನಾಟಕ
ಹಾಡು ಕರ್ನಾಟಕ

By

Published : Aug 17, 2020, 1:33 PM IST

ಸಂಗೀತ ಪ್ರಿಯರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಿಮ್ಮೆಲ್ಲರ ನೆಚ್ಚಿನ 'ಹಾಡು ಕರ್ನಾಟಕ' ರಿಯಾಲಿಟಿ ಶೋ ಇದೀಗ ಹೊಸ ಸಂಚಿಕೆಗಳೊಂದಿಗೆ ಮತ್ತೆ ಮೂಡಿ ಬರಲಿದೆ.

ಹೌದು, ಲಾಕ್​​​ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ 'ಹಾಡು ಕರ್ನಾಟಕ' ಶೋ ಮತ್ತೊಮ್ಮೆ ಮನರಂಜನೆ ನೀಡಲು ಬರುತ್ತಿದೆ. ಈ ಮೂಲಕ ಸಂಗೀತಪ್ರಿಯರಿಗೆ ಮಗದೊಮ್ಮೆ ಗಾನಸುಧೆಯನ್ನು ಕೇಳುವ ಸುವರ್ಣವಕಾಶ ದೊರೆಯಲಿದೆ.

ಹಾಡುವ ಪ್ರತಿಭೆಗಳನ್ನು ಗುರುತಿಸಿ, ಉತ್ತಮ ವೇದಿಕೆ ಕಲ್ಪಿಸಿಕೊಟ್ಟು ಅವರೊಳಗಿನ ಅದ್ಭುತ ಪ್ರತಿಭೆಯನ್ನು ಎಲ್ಲೆಡೆ ಪಸರಿಸಲು ಈಗಾಗಲೇ ಹಲವು ಬಗೆಯ ಶೋಗಳು ಬಂದಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿದೆ. ಈ ಸಾಲಿಗೆ 'ಹಾಡು ಕರ್ನಾಟಕ'ವೂ ಸೇರಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮ, ಲಾಕ್​​​ಡೌನ್ ನಂತರ ಮತ್ತೆ ಪ್ರಸಾರವಾಗುತ್ತಿರುವುದು ವೀಕ್ಷಕರಿಗೆ ಸಂತಸ ತಂದಿದೆ.

'ರಾಜ-ರಾಣಿ' ಧಾರಾವಾಹಿಯಲ್ಲಿ ಚುಕ್ಕಿಯಾಗಿ ನಟಿಸಿದ ಚಂದನಾ ಹಾಡು ಕರ್ನಾಟಕದ ಮೂಲಕ ಮೊದಲ ಬಾರಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಮೊದಲ ಪ್ರಯತ್ನದಲ್ಲೇ ವೀಕ್ಷಕರ ಮನಗೆದ್ದಿದ್ದರು. ಚಂದನಾ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ , ರಘು ದೀಕ್ಷಿತ್, ಸಾಧುಕೋಕಿಲ, ವಾರಿಜಾಶ್ರೀ, ಇಂದು ನಾಗರಾಜ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ‌.

ಈ ಮೊದಲು ಕಲರ್ಸ್ ಸೂಪರ್ ನಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಇದೀಗ ಯಾವಾಗ ಮತ್ತು ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಹೊರಬೀಳಬೇಕಿದೆಯಷ್ಟೇ.

ABOUT THE AUTHOR

...view details