ಖ್ಯಾತ ಬೆಂಗಾಲಿ ನಟಿ, ಗಾಯಕಿ ರುಮಗುಹ ತಕುರ್ತ ಕೋಲ್ಕತಾದ ತಮ್ಮ ಸ್ವಗೃಹದಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ರುಮಗುಹ ಬಾಲಿವುಡ್ ಖ್ಯಾತ ನಟ, ಗಾಯಕ, ನಿರ್ಮಾಪಕ ಕಿಶೋರ್ ಕುಮಾರ್ ಮೊದಲ ಪತ್ನಿ.
ಖ್ಯಾತ ಬೆಂಗಾಲಿ ನಟಿ, ಗಾಯಕಿ ರುಮಗುಹ ತಕುರ್ತ ವಿಧಿವಶ.. ಕಂಬನಿ ಮಿಡಿದ ಮಮತಾ ದೀದಿ - undefined
ಖ್ಯಾತ ಬಾಲಿವುಡ್ ನಟ ಕಿಶೋರ್ ಕುಮಾರ್ ಮೊದಲ ಪತ್ನಿ ರುಮಗುಹ ತಕುರ್ತ ಇಂದು ನಿಧನರಾಗಿದ್ದಾರೆ. 84 ವರ್ಷ ವಯಸ್ಸಿನ ರುಮಗುಹ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
![ಖ್ಯಾತ ಬೆಂಗಾಲಿ ನಟಿ, ಗಾಯಕಿ ರುಮಗುಹ ತಕುರ್ತ ವಿಧಿವಶ.. ಕಂಬನಿ ಮಿಡಿದ ಮಮತಾ ದೀದಿ](https://etvbharatimages.akamaized.net/etvbharat/prod-images/768-512-3461629-thumbnail-3x2-rumaguha.jpg)
1934 ನವೆಂಬರ್ 21 ರಂದು ಸತ್ಯೇನ್ ಘೋಷ್ ಹಾಗೂ ಸತಿದೇವಿ ದಂಪತಿಗೆ ಕೋಲ್ಕತಾದಲ್ಲಿ ರುಮಗುಹ ಜನಿಸಿದರು. ತಾಯಿ ಸತಿದೇವಿ ಕೂಡಾ ಗಾಯಕಿಯಾಗಿದ್ದರಿಂದ ರುಮಗುಹ ಕೂಡಾ ಹಿನ್ನೆಲೆ ಗಾಯಕಿಯಾಗಿ ತಮ್ಮ ಕೆರಿಯರ್ ಆರಂಭಿಸಿದರು. ಗಾಯಕಿಯಾಗಿ ಮಾತ್ರವಲ್ಲ ನಟಿಯಾಗಿ ಕೂಡಾ ರುಮ ಹೆಸರು ಮಾಡಿದ್ದಾರೆ. 1951ರಲ್ಲಿ ನಟ ಕಿಶೋರ್ಕುಮಾರ್ ಅವರನ್ನು ರುಮ ಮದುವೆಯಾದರು. ಈ ದಂಪತಿಗೆ ಅಮಿತ್ ಕುಮಾರ್ ಎಂಬ ಮಗನಿದ್ದಾರೆ. 1958ರಲ್ಲಿ ಕಿಶೋರ್ ಕುಮಾರ್ ಅವರಿಂದ ವಿಚ್ಛೇದನ ಪಡೆದ ರುಮ ನಂತರ ಅರುಪ್ ಗುಹ ತಕುರ್ತ ಎಂಬುವರನ್ನು ವಿವಾಹವಾದರು. ಈ ದಂಪತಿಗೆ ಕೂಡಾ ಸ್ರೊಮೊನಾ ಗುಹ ತಕುರ್ತ ಎಂಬ ಮಗಳಿದ್ದಾರೆ.
ಅಫ್ಸರ್, ರಾಗ್ರಂಗ್, ಅಭಿಜಾನ್, ಗರ್ ನಾಸಿಮ್ಪುರ್, ಬೈರಾಗ್, ಪತ್ ಓ ಪ್ರಸಾದ್ ಸೇರಿ ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗುಹ ನಟಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುಮ ಇಂದು ಬೆಳಗ್ಗೆ ಕೋಲ್ಕತಾದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ರುಮ ನಿಧನಕ್ಕೆ ಬಾಲಿವುಡ್ ಹಾಗೂ ಬೆಂಗಾಳಿ ಚಿತ್ರರಂಗ ಶ್ರದ್ಧಾಂಜಲಿ ಅರ್ಪಿಸಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡಾ ರುಮ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.