ಕರ್ನಾಟಕ

karnataka

ETV Bharat / sitara

ರಾಜ್ಯಾದ್ಯಂತ 'ಕವಲುದಾರಿ' ಬಿಡುಗಡೆ: ಉತ್ತಮ ಸಂದೇಶವಿರುವ ಚಿತ್ರಕ್ಕೆ ಪ್ರೇಕ್ಷಕ ಫಿದಾ

By

Published : Apr 12, 2019, 7:10 PM IST

Updated : Apr 12, 2019, 8:44 PM IST

ಕವಲುದಾರಿ

ಸಾಕಷ್ಟು ಕುತೂಹಲ ಕೆರಳಿಸಿದ್ದ 'ಕವಲುದಾರಿ' ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ತೆರೆ ಕಂಡಿದೆ. ಇದು ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಪಿಆರ್​ಕೆ ಬ್ಯಾನರ್​​ನಿಂದ ಬಿಡುಗಡೆಯಾದ ಮೊದಲ ಸಿನಿಮಾ.

ರಾಜ್ಯಾದ್ಯಂತ ಬಿಡುಗಡೆಯಾದ 'ಕವಲುದಾರಿ' ಸಿನಿಮಾ

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಮಾಡಿ ಸಕ್ಸಸ್ ಆಗಿದ್ದ ನಿರ್ದೇಶಕ ಹೇಮಂತ್ ರಾವ್​ ಮತ್ತೊಂದು 'ಕವಲುದಾರಿ' ಯಂತ ಒಳ್ಳೆ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸಿನಿಮಾಗೆ ಹೇಮಂತ್ ಅವರೇ ಚಿತ್ರಕಥೆ ಬರೆದಿದ್ದಾರೆ. ಸಿನಿಮಾ ನಿಜಕ್ಕೂ ಸಿನಿಪ್ರಿಯರ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದೆ. ಕ್ರೈಂ ಥ್ರಿಲ್ಲರ್ ಕಥೆ ಆಧರಿಸಿರುವ ಕವಲುದಾರಿ ಸಿನಿಮಾ ಸದ್ಯಕ್ಕೆ ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯ ವ್ಯವಸ್ಥೆ, ಅಧಿಕಾರದ ಆಸೆ, ಬೇರೆಯವರನ್ನು ಬಲಿ ಕೊಟ್ಟು ನಾನು ಚೆನ್ನಾಗಿರಬೇಕು ಎಂಬ ಮನೋಭಾವ... ಹೀಗೆ ಸೂಕ್ಷ್ಮ ವಿಷಯಗಳ ಬಗ್ಗೆ ಕವಲುದಾರಿ ಸಿನಿಮಾ ಬೆಳಕು ಚೆಲ್ಲುತ್ತದೆ.

ಒಂದು ಕುಟುಂಬದ ಸಾವಿನ ಸುತ್ತ ಆರಂಭವಾಗುವ ಕವಲುದಾರಿ ಸಿನಿಮಾ ಕ್ಷಣ ಕ್ಷಣಕ್ಕೂ ರೋಚಕತೆಯಿಂದ ಕೂಡಿದೆ. ಟ್ರಾಫಿಕ್ ಪೊಲೀಸ್ ಆಗಿ ನಟಿಸಿರುವ ನಾಯಕ ನಟ ಶ್ಯಾಮ್ (ರಿಷಿ)ಗೆ ಕ್ರೈಂ ಬ್ರಾಂಚ್ ಪೊಲೀಸ್ ಆಫೀಸರ್ ಆಗಿ, ಕ್ರೈಂ ಇನ್ವೆಷ್ಟಿಗೇಶನ್ ಮಾಡಬೇಕು ಎಂಬ ಆಸೆ. ಆದರೆ ಮೇಲಾಧಿಕಾರಿಗಳು ಶ್ಯಾಮ್ ಆಸೆಗೆ ತಣ್ಣೀರು ಎರುಚುವ ಕೆಲಸ ಮಾಡುತ್ತಾರೆ. ಆದರೂ ರಿಷಿ ಒಂದು ಕೊಲೆಯ ಕೇಸನ್ನು ಸ್ಟಡಿ ಮಾಡಿ, ಆ ಕೊಲೆಯ ಹಿಂದಿನ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ ಅನ್ನೋದು ಸಿನಿಮಾದ ಕಥೆ.

ಈ ಕೊಲೆಯ ಸಾಕ್ಷಿಗಳನ್ನು ಕೆದುಕುತ್ತಾ ಹೋದಾಗ ಅನಂತ್​ನಾಗ್​ ಟೆರಿಫಿಕ್ ಎಂಟ್ರಿ ಥಿಯೇಟರ್​​​​​​ನಲ್ಲಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತದೆ. ಪ್ರಾಮಾಣಿಕ, ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ಮುತ್ತಣ್ಣ ಕ್ಯಾರೆಕ್ಟರ್ ಮಾಡಿರುವ ಅನಂತ್ ನಾಗ್, ನಿಜಕ್ಕೂ ಲೈಫ್ ಟೈಮ್ ಕಾಡುವ ಪಾತ್ರದಲ್ಲಿ ಮಿಂಚಿದ್ದಾರೆ. ಅನಂತ್​​​​​​​​​​​​​​​​​​​ನಾಗ್, ನಾಯಕ ನಟ ರಿಷಿ, ಅಚ್ಯುತ್ ಕುಮಾರ್ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ನಟ-ನಟಿಯರು ಹೊಸಬರೇ. ಇವರ ಪಾತ್ರಗಳು ಕೂಡಾ ನೋಡುಗರ ಗಮನ ಸೆಳೆಯುತ್ತದೆ. ಬಡಹುಡುಗಿಯಾಗಿ ರೋಷಿಣಿ ಪ್ರಕಾಶ್ ಗಮನ ಸೆಳೆಯುತ್ತಾರೆ.

ಚರಣ್​​​ರಾಜ್ ಸಂಗೀತ ಹಾಗೂ ಅದ್ವೈತ ಅವರ ಕ್ಯಾಮರಾ ವರ್ಕ್ ಚಿತ್ರದ ಪ್ಲಸ್ ಪಾಯಿಂಟ್. ಮೊದಲಾರ್ಧದಲ್ಲಿ ಬರುವ ಒಂದೊಂದು ದೃಶ್ಯ ಹಾಗೂ ಸನ್ನಿವೇಶಗಳು, ಥಿಯೇಟರ್​​​​​ನಲ್ಲಿ ಕುಳಿತ ಪ್ರೇಕ್ಷಕರಿಗೆ ಕ್ಷಣ ಕ್ಷಣಕ್ಕೂ ಏನಾಗುತ್ತೆ ಎಂಬ ಕುತೂಹಲವನ್ನು ಹೆಚ್ಚಿಸುತ್ತವೆ. ಸೆಕೆಂಡ್ ಆಫ್ ಸ್ವಲ್ಪ ಬೋರ್ ಎನಿಸಿದರೂ ಅನಂತ್​​ನಾಗ್​​ ಚಾರ್ಮಿಂಗ್, ರಿಷಿ ಅಭಿನಯ ಈ ಗ್ಯಾಪ್ ತುಂಬುತ್ತದೆ.

ಪಿಆರ್​​​ಕೆ ಪ್ರೊಡಕ್ಷನ್ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್​​​​​​​​​​​​​​​ಕುಮಾರ್ ನಿರ್ಮಿಸಿರುವ 'ಕವಲುದಾರಿ' ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿರುವ ಸಿನಿಮಾವಾಗಿದೆ. ಹಾಗೇ ಪೊಲೀಸರ ಬಗ್ಗೆ ಜನರಿಗೆ ಇರುವ ಅಸಮಾಧಾನವನ್ನು ಈ ಸಿನಿಮಾ ಹೋಗಲಾಡಿಸುತ್ತದೆ.

Last Updated : Apr 12, 2019, 8:44 PM IST

For All Latest Updates

TAGGED:

ABOUT THE AUTHOR

...view details