ಕೊರೊನಾ ಎರಡನೇ ಅಲೆಯಿಂದ ಸಂಪೂರ್ಣವಾಗಿ, ಸ್ತಬ್ಧವಾಗಿದ್ದ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಸಿನಿಮಾ ಚಿತ್ರೀಕರಣ ಆರಂಭಿಸಿದೆ. ಈಗಾಗಲೇ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ಹೊಸಬರ ಸಿನಿಮಾಗಳ ಶೂಟಿಂಗ್ ಶುರುವಾಗಿದೆ.
ಕಸ್ತೂರಿ ಮಹಲ್ ಚಿತ್ರದ ಬಳಿಕ, ಚಂದ್ರಲೇಖಾ ಸುಂದರಿ ಶಾನ್ವಿ ಶ್ರೀವಾತ್ಸವ್ ಅಭಿನಯದ 'ಬ್ಯಾಂಗ್' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನ ಹೆಚ್.ಎಮ್.ಟಿ ಫ್ಯಾಕ್ಟರಿಯಲ್ಲಿ ಶಾನ್ವಿ ಶ್ರೀವಾತ್ಸವ್ ಅವರ ಆ್ಯಕ್ಷನ್ ಸನ್ನಿವೇಶಗಳನ್ನ ಶೂಟ್ ಮಾಡಲಾಗುತ್ತಿತ್ತು. ಆದರೆ ನಿನ್ನೆ ಆ್ಯಕ್ಷನ್ ಸೀಕ್ವೆನ್ಸ್ ಮಾಡುವ ವೇಳೆ, ಶಾನ್ವಿ ಶ್ರೀವಾತ್ಸವ್ ಕಾಲಿಗೆ ಪೆಟ್ಟಾಗಿ ಸುಸ್ತಾಗಿ ಬಿದ್ದಿದ್ದಾರೆ. ನಿರಂತರ 8 ಗಂಟೆಗಳ ಕಾಲ ಮಳೆಯಲ್ಲೇ ಶೂಟಿಂಗ್ ಮಾಡಿದ ಕಾರಣ ಶಾನ್ವಿ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಈ ಕಾರಣಕ್ಕೆ ಒಂದು ವಾರ ಕಾಲ ಶೂಟಿಂಗ್ನ್ನು ಮುಂದೂಡಲಾಗಿದೆ.