ಕರ್ನಾಟಕ

karnataka

ETV Bharat / sitara

ಹೊಸ ಚಿತ್ರದಲ್ಲಿ ರಣಬೀರ್ ಕಪೂರ್ - ಶ್ರದ್ಧಾ ಕಪೂರ್ ಬ್ಯೂಸಿ - ಹೊಸ ಚಿತ್ರದಲ್ಲಿ ಬ್ಯೂಸಿ

ನಿರ್ಮಾಪಕ ಲವ್ ರಂಜನ್ ನಿರ್ಮಿಸಿದ ಇನ್ನೂ ಹೆಸರಿಡದ ಚಿತ್ರೀಕರಣವು ಮುಂಬೈನಲ್ಲಿ ಆರಂಭವಾಗಿದೆ. 2018ರ ನಂತರ ಮತ್ತೆ ಶ್ರದ್ಧಾ ಮತ್ತು ರಣಬೀರ್ ಒಂದಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

shoot
shoot

By

Published : Mar 9, 2022, 12:29 PM IST

ಮುಂಬೈ (ಮಹಾರಾಷ್ಟ್ರ):ಬಾಲಿವುಡ್​​ ನಟ ರಣಬೀರ್ ಕಪೂರ್ ಮತ್ತು ನಟಿ ಶ್ರದ್ಧಾ ಕಪೂರ್ ಮತ್ತೆ ಬ್ಯೂಸಿ ಆಗಿದ್ದಾರೆ. ನಿರ್ಮಾಪಕ ಲವ್ ರಂಜನ್ ನಿರ್ಮಿಸಿದ ಇನ್ನೂ ಹೆಸರಿಡದ ಸಿನಿಮಾದ ಚಿತ್ರೀಕರಣವು ಮುಂಬೈನಲ್ಲಿ ಆರಂಭವಾಗಿದ್ದು, ಈ ಜೋಡಿ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ತಿಂಗಳು ನಿರ್ಮಾಪಕ ರಂಜನ್ ವಿವಾಹ ಕಾರಣ ರಣಬೀರ್ ಮತ್ತು ಶ್ರದ್ಧಾ ಸಣ್ಣ ವಿರಾಮ ಪಡೆದಿದ್ದರು. ಈಗ ಹೊಸ ಶೆಡ್ಯೂಲ್ಡ್​ ಪ್ರಕಾರ ಮಂಗಳವಾರದಿಂದ ಇಬ್ಬರೂ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣ ಮುಗಿಸಿದ ನಂತರ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಮತ್ತೊಂದು ಸ್ಥಳಕ್ಕೆ ತೆರಳಲಿದ್ದಾರೆ.

ರೊಮ್ಯಾಂಟಿಕ್ ಮತ್ತು ಕಾಮಿಡಿಯಿಂದ ಕೂಡಿರುವ ಈ ಹೊಸ ಚಿತ್ರದಲ್ಲಿ 2018ರ ನಂತರ ಮತ್ತೆ ಶ್ರದ್ಧಾ ಮತ್ತು ರಣಬೀರ್ ಒಂದಾಗಿ ನಟಿಸುತ್ತಿದ್ದಾರೆ. ಮುಂದಿನ ವರ್ಷದ ಚಿತ್ರ ತರೆಗೆ ಬರುವ ನಿರೀಕ್ಷೆ ಇದೆ. ಈ ಮೊದಲು 2023ರ ಜನವರಿ 26ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈಗ 2023ರ ಮಾರ್ಚ್ 8ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಎನ್ನಲಾಗುತ್ತಿದೆ.

ABOUT THE AUTHOR

...view details