ಕನ್ನಡ ಭಾಷೆ, ನೆಲ, ಜಲ ಅಂತಾ ಬಂದಾಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಆದ್ರೆ ಕೆಲವು ಹೋರಾಟಕ್ಕೆ ಜಯ ಸಿಕ್ಕಿವೆ. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಜನರ ಮನಸ್ಸಿಲ್ಲಿ ಅಚ್ಚಳಿಯದೆ ಉಳಿದಿರುವ ಗೋಕಾಕ್ ಚಳುವಳಿ. ಈ ಹಿನ್ನೆಲೆಯನ್ನಿಟ್ಟುಕೊಂಡು ಅದಕ್ಕೆ ಒಂದು ಸುಂದರ ಮತ್ತು ಪರಿಶುದ್ಧ ಪ್ರೇಮ ಕಥೆಯನ್ನು ಹೊಂದಿರುವ ಗೀತಾ ಸಿನಿಮಾಕ್ಕೆ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಆಕಾಶ್ (ಗಣೇಶ್) ಅಪ್ಪ ಅಮ್ಮನ ಪ್ರೀತಿಯನ್ನು ಪ್ರತ್ಯೇಕವಾಗಿ ಪಡೆದವನು. ಆದರೆ ಅವರಿಬ್ಬರೂ ಏಕೆ ಬೇರೆಯಾದರೂ ಎಂಬದನ್ನು ಕೇಳಿದಾಗ, ಶಂಕರ್ ಅಂದ್ರೆ ದೇವರಾಜ್ 1981ರಲ್ಲಿ ಕನ್ನಡ ಹೋರಾಟಗಾರನಾಗಿ ಗಣೇಶ್ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಗೀತಾ ಸಿನಿಮಾ ಕಥೆ ಓಪನ್ ಆಗೋದು ಇಲ್ಲಿಂದ. ಶಂಕರ್‌ಗೂ ಆಕಾಶ್‌ಗೂ ಏನು ಸಂಬಂಧ ಅಂತಾ ತಿಳಿಯಬೇಕು ಅಂದ್ರೆ ಸಿನಿಮಾ ನೋಡಲೇಬೇಕು.
ಗೋಕಾಕ್ ಚಳವಳಿ ಕಥೆ ಇಟ್ಟುಕೊಂಡಿದ್ದಾರೆ ಎಂದ ಮೇಲೆ ಅದನ್ನು ಹೇಗೆ ತೋರಿಸಿದ್ದಾರೆ, ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಭಾಗವನ್ನು ನಿರ್ದೇಶಕ ವಿಜಯ ನಾಗೇಂದ್ರ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆ ಸಮಯದಲ್ಲಿ ಇದ್ದ ಕಾಸ್ಟ್ಯೂಮ್, ಅದಕ್ಕೆ ತಕ್ಕ ಲೊಕೇಷನ್ ಸೇರಿದಂತೆ ಸಣ್ಣ ಸಣ್ಣ ಅಂಶಗಳನ್ನು ಎಚ್ಚರಿಕೆಯಿಂದ ಮಾಡಿದ್ದಾರೆ. ಆವತ್ತಿನ ದಿನದಲ್ಲಿ ಕನ್ನಡಕ್ಕಾಗಿ ಸಾಹಿತಿಗಳ ಜೊತೆ ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಹೋರಾಟದ ಡಾಕ್ಯುಮೆಂಟರಿಯನ್ನ ಗೀತಾ ಸಿನಿಮಾದ ಫ್ಲ್ಯಾಶ್‌ಬ್ಯಾಕ್ ಕಥೆಗೆ ಬಳಸಿಕೊಂಡಿರೋದು ಈ ಸಿನಿಮಾ ಹೈಲೆಟ್.