ಕರ್ನಾಟಕ

karnataka

ETV Bharat / sitara

ಭಾನು ವೆಡ್ಸ್ ಭೂಮಿ ವಿಮರ್ಶೆ: ಮೊದಲರ್ಧ ಸಹನೆ ಪರೀಕ್ಷೆ ಆಮೇಲೆ ಹುಸಿಯಾಗದ ನಿರೀಕ್ಷೆ - ರಂಗಾಯಣ ರಘು

ಭಾನು ವೆಡ್ಸ್ ಭೂಮಿ

By

Published : Aug 2, 2019, 4:36 PM IST

ಇಂದು ರಾಜ್ಯಾದ್ಯಂತ ತೆರೆಕಂಡಿರುವ ಭಾನು ವೆಡ್ಸ್​​ ಭೂಮಿ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ..

ಯಾರು ಈ ಭೂಮಿ?

ನಾಯಕಿ ಭೂಮಿ ಮನೆಯಿಂದ ಓಡಿಬಂದು ಮೈಸೂರಿನಲ್ಲಿ ತನ್ನ ಪ್ರಿಯಕರ ಪ್ರಭು ಅನ್ನು ಹುಡುಕುತ್ತಿರುತ್ತಾಳೆ. ಅಪರಿಚಿತ ಜಾಗದಲ್ಲಿ ಅವಳಿಗೆ ನಾಯಕ ಭಾನು ಸಿಗುತ್ತಾನೆ. ತನ್ನ ಪ್ರಿಯಕರ ಹುಡುಕಾಟಕ್ಕೆ ಈತನ ಸಹಾಯ ಕೋರುತ್ತಾಳೆ. ಈ ಓಡಾಟದಲ್ಲಿ ಭಾನು ಹಾಗೂ ಭೂಮಿ ಸ್ನೇಹ ಬೆಳೆದು ಪ್ರೀತಿಗೆ ಬಡ್ತಿ ಪಡೆಯುತ್ತದೆ. ಆದರೆ, ಈ ಪ್ರಭು ಕಥೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಚಿತ್ರ ನೋಡಿದರೆ ಗೊತ್ತಾಗುತ್ತೆ.

ಕತ್ತರಿ ಹಾಕಬೇಕಿತ್ತು :

ಮೊದಲ ಭಾಗದಲ್ಲಿ ಕೆಲವು ಅನಾವಶ್ಯಕ ಸನ್ನಿವೇಶಗಳನ್ನು ನಿರ್ದೇಶಕರು ಬಿಟ್ಟು ಬಿಡಬಹುದಿತ್ತು. ಪ್ರಭು ಪಾತ್ರದ ಹುಡುಕಾಟಕ್ಕೆ ಮತ್ತಷ್ಟು ಕೌತುಕ ಸನ್ನಿವೇಶಗಳನ್ನು ತುಂಬ ಬಹುದಿತ್ತು.

ಇನ್ನು ಮೊದಲ ಸಿನಿಮಾದಲ್ಲೇ ನಟ ಸೂರ್ಯ ಪ್ರಭು ಸಾಹಸ ಸನ್ನಿವೇಶಗಳಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ರಕ್ಷಿತಾ ಮಲ್ನಾಡ್ ಮುದ್ದಾಗಿ ಕಾಣುವುದರ ಜತೆಗೆ ಅಭಿನಯದಲ್ಲೂ ಮೆಚ್ಚುಗೆ ಪಡೆಯುತ್ತಾರೆ. ಮಿಕ್ಕಂತೆ ಚಿತ್ರದಲ್ಲಿ ಇಷ್ಟ ಆಗುವುದು ಶೋಭರಾಜ್ ಅವರ ಪೊಲೀಸ್ ಪಾತ್ರ. ಇಲಾಖೆಯಲ್ಲಿ ಪ್ರೇಮಿಗಳಿಗೆ ಮದುವೆ ಮಾಡಿಸಿದರೆ ಪ್ರೋಮೋಷನ್ ಮತ್ತು ಮನೆಯಲ್ಲಿ ಮಡದಿಯ ಮೆಚ್ಚುಗೆ ಪಡೆಯುವ ಪೋರ್ಷನ್ ಚನ್ನಾಗಿ ಮೂಡಿ ಬಂದಿದೆ. ರಂಗಾಯಣ ರಘು ಅವರ ಉಪಕಥೆ ಪ್ರೇಮಿಗಳಿಗೆ ಒಂದು ಪುಷ್ಟಿ ನೀಡುವುದು. ಹಾಗೆ ರಂಗಾಯಣ ರಘು ಅವರ ಕಲರ್ ಕಲರ್ಸ್ ಹಾಡಿಗೆ ಶೋಭಾರಾಜ್ ಕುಣಿದಿದ್ದಾರೆ ಮಜಬೂತಾಗಿದೆ. ಎ.ಎಂ.ನೀಲ್ ಅವರ ಎರಡು ಮಧುರ ಗೀತೆಗಳು ಮತ್ತು ಗಣೇಶ್ ಹೆಗ್ಡೆ ಛಾಯಾಗ್ರಹಣ ಭೇಷ್ ಅನ್ನಿಸಿಕೊಳ್ಳುತ್ತವೆ.

ಭೂಮಿ ಹಾಗೂ ಭಾನು ಒಟ್ಟಿಗೆ ಸೇರುವರೇ? ಎಂಬುದನ್ನು ನೋಡಲು ಪ್ರೇಕ್ಷಕರಿಗೆ ಸಹನೆ ಅಗತ್ಯ. ಪ್ರಥಮ ನಿರ್ದೇಶನದಲ್ಲಿ ಜೆ.ಕೆ.ಆದಿ ದ್ವಿತೀಯಾರ್ಧದಲ್ಲಿ ತೋರದ ಲಗುಬಗೆ ಮೊದಲಾರ್ಧದಲ್ಲಿ ತೋರಿದ್ದರೆ ಚಿತ್ರ ಸಹನೀಯ ಆಗಿರುತ್ತಿತ್ತು. ಆದರೂ ಚಿತ್ರದಲ್ಲಿ ಬರುವ ಉಪ ಕಥೆಗಳು - ಶೋಭಾರಾಜ್ ಹಾಗೂ ರಂಗಾಯಣ ರಘು ಅವರ ಭಾಗ ಚಿತ್ರಕ್ಕೆ ಒಂದು ಗತ್ತು ತಂದುಕೊಟ್ಟಿದೆ.

ABOUT THE AUTHOR

...view details