ಮುಂಬೈ:1994ರ ಭುವನ ಸುಂದರಿಯಾಗಿದ್ದ ಸುಷ್ಮಿತಾ ಸೇನ್ ಹಾಗೂ 2000ದಲ್ಲಿ ಪಟ್ಟಕ್ಕೇರಿದ್ದಲಾರಾ ದತ್ತಾ ಭೂಪತಿ ಅವರು ಈ ವರ್ಷದ ಭುವನ ಸುಂದರಿ ಪಟ್ಟ ಅಲಂಕರಿಸಿದ ಹರ್ನಾಜ್ ಸಂಧು ಅವರನ್ನ ಅಭಿನಂದಿಸಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ಮಾಡಿ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.
ವಿಶೇಷ ಎಂದರೆ ಲಾರಾ ದತ್ತ ಭುವನ ಸುಂದರಿ ಪಟ್ಟ ಅಲಂಕರಿಸಿದ ವರ್ಷ ಹುಟ್ಟಿದ ಹರ್ನಾಜ್ 21 ವರ್ಷಗಳ ಬಳಿಕ ಈ ಪಟ್ಟಕ್ಕೇರಿದ ಸಾಧನೆ ಮಾಡಿರೋದು ವಿಶೇಷ. ಹಾಗಾಗಿ ಹರ್ನಾಜ್ ಡೆಸ್ಟಿನೀಸ್ ಚೈಲ್ಡ್( ದೇವರ ಮಗು) ಎಂದೇ ಬಣ್ಣಿಸಲಾಗುತ್ತಿದೆ.
ಆರ್ಯ ವೆಬ್ ಸಿರೀಸ್ಗೆ ಮತ್ತೆ ಮರಳಿರುವ ಮಾಜಿ ಸುಂದರಿ ಸುಷ್ಮಿತಾ ಸೇನ್, ಇನ್ಸ್ಟಾಗ್ರಾಂನಲ್ಲಿ ಹರ್ನಾಜ್ ಅವರ ಎರಡು ಫೋಟೋ ಪೋಸ್ಟ್ ಮಾಡಿ ಅಡಿ ಬರಹವನ್ನು ಬರೆದಿದ್ದಾರೆ. ಹರ್ನಾಜ್ ಕೌರ್ ಸಂದು ನಿಮ್ಮ ಬಗ್ಗೆ ಹೆಮ್ಮೆ ಇದೆ.. ಕಂಗ್ರಾಜುಲೇಷನ್ ಎಂದು ಬರೆದುಕೊಂಡಿದ್ದಾರೆ.. (#yehbaat 'Har Hindustani Ki Naz'' Harnaaz Kaur Sandhu #MissUniverse2021 #INDIAAAAAA Soooooo proud of you!!!! Congratulations @harnaazsandhu_03. )
ಮತ್ತೊಂದು ಪೋಸ್ಟ್ನಲ್ಲಿ 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಂದು ಕಿರೀಟ್ ತಂದುಕೊಟ್ಟಿದ್ದಕ್ಕೆ ಧನ್ಯವಾದ.. ಮತ್ತೆ ಭಾರತವನ್ನು ಪ್ರತಿನಿಧಿಸಿದ್ದಕ್ಕೆ ಹಾಗೂ ಸುಂದರವಾದ ಕಿರೀಟವನ್ನ ಧಸಿದ್ದಕ್ಕೆ ಶಹಬ್ಬಾಸ್ ಎಂದಿದ್ದಾರೆ. ಅಷ್ಟೇ ಅಲ್ಲ ಈ ಅದ್ಭುತ ಜಾಗತಿಕ ವೇದಿಕೆ ಕಲಿಯಲು ಮತ್ತು ಪ್ರತಿ ಕ್ಷಣವನ್ನ ನೀವು ಆನಂದಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ನಿಮ್ಮದೇ ರಾಜ್ಯಭಾರ ಎಂದಿದ್ದಾರೆ.