ಹೈದರಾಬಾದ್: ತನ್ನ ಗೆಳೆಯ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ಮರಣದ ನಂತರ ಸುದ್ದಿಯಿಂದ ದೂರ ಉಳಿದಿದ್ದ ನಟಿ ಶೆಹನಾಜ್ ಗಿಲ್ ಇತ್ತೀಚೆಗೆ ಕೆಲಸಕ್ಕೆ ಮರಳಿದ್ದಾರೆ. ಶೆಹನಾಜ್ ಗಿಲ್ ತನ್ನ ಮುಂಬರುವ ಪಂಜಾಬಿ ಚಿತ್ರ ಹೊನ್ಸಲಾ ರಾಖ್‌ನ ಪ್ರಚಾರಕ್ಕಾಗಿ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ.
'ಬಿಗ್ ಬಾಸ್ 13' ವಿಜೇತ ಸಿದ್ದಾರ್ಥ್ ಶುಕ್ಲಾ ಇತ್ತೀಚೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಟೆಲಿವಿಷನ್ ಸ್ಟಾರ್ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನದಿಂದ ಮಧುರ ಪ್ರೇಮಕಥೆ ದುರಂತ ಅಂತ್ಯವಾಗಿದೆ. ಶುಕ್ಲಾ ನಿಧನದ ನಂತರ ಅವರ ಗೆಳತಿ ಶೆಹನಾಜ್ ಗಿಲ್ ಸುದ್ದಿಯಿಂದ ಕೊಂಚ ದೂರವೇ ಉಳಿದಿದ್ದರು. ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ.