ಮುಂಬೈ: "ಸನಕ್ - ಹೋಪ್ ಅಂಡರ್ ಸೀಝ್'' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಹಳ ಸಾಹಸಯುತ ಪ್ರದರ್ಶನಗಳು, ಸಾಕಷ್ಟು ಆ್ಯಕ್ಷನ್ ಸೀನ್ಗಳಿಂದ ಕೂಡಿದೆ.
ಎರಡೂವರೆ ನಿಮಿಷದ ಈ ಟ್ರೈಲರ್, ಉಗ್ರರಿಂದ ಸೀಝ್ ಆಗಿದ್ದ ಆಸ್ಪತ್ರೆಯೊಂದರ ಕಥೆಯ ಒಂದು ನೋಟವನ್ನು ನೀಡುತ್ತದೆ. ಬಾಲಿವುಡ್ ನಟ ವಿದ್ಯುತ್ ಜಾಮ್ವಾಲ್ ಅವರು ವಿವಾನ್ ಅಹುಜಾ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ಮೈತ್ರಾ ಅವರು ವಿವಾನ್ ಅಹುಜಾರ ಪತ್ನಿ ಹನ್ಸಿಕಾ ಪಾತ್ರದಲ್ಲಿ ನಟಿಸಿದ್ದಾರೆ. ಹನ್ಸಿಕಾ ಸೀಜ್ ಆಗಿದ್ದ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ. ಆ ಕಠಿಣ ಸನ್ನಿವೇಶವನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ.
ಆಸ್ಪತ್ರೆಯೊಂದಕ್ಕೆ ನುಗ್ಗಿ ಅಲ್ಲಿನ ರೋಗಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಉಗ್ರರನ್ನು ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ ಚಿತ್ರದ ನಾಯಕ ಹೇಗೆ ಎಲ್ಲರನ್ನು ಪಾರು ಮಾಡುತ್ತಾನೆ ಎಂಬ ಕಥೆಯನ್ನು ಈ ಸಿನಿಮಾ ಹೊಂದಿದೆ. ಟ್ರೈಲರ್ನಲ್ಲಿ ಸಾಹಸ ದೃಶ್ಯಗಳ ತುಣುಕುಗಳು ನೋಡುಗರನ್ನು ರೋಮಾಂಚನಗೊಳಿಸಿದೆ.
ಇದನ್ನೂ ಓದಿ:ಹರಿದ್ವಾರಕ್ಕೆ ಬಂದ ನಟಿ ಊರ್ವಶಿ ರೌಟೆಲಾ.. ತಾಯಿ ಜೊತೆ ರಿಕ್ಷಾ ಪ್ರಯಾಣ ಮಾಡಿ ಮನಗೆದ್ದ ರೂಪದರ್ಶಿ..
"ಸನಕ್ - ಹೋಪ್ ಅಂಡರ್ ಸೀಝ್'' ಚಿತ್ರದ ಟ್ರೈಲರ್ ಸಾಕಷ್ಟು ಸ್ಟಂಟ್‌ಗಳನ್ನು ಒಳಗೊಂಡಿದ್ದು, ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿವಾನ್ ಅಹುಜಾ ಹಾಸ್ಪಿಟಲ್ ಸೆಟ್ಅಪ್ನಲ್ಲಿ ಹಲವರನ್ನು ಸೋಲಿಸುವ ದೃಶ್ಯಗಳನ್ನು ಕಾಣಬಹುದು. ''ಏಕ್ ಬಾರ್ ಸನಕ್ ಗಿ ನಾ.....ಬಾದ್ಮೆ ಬೋಲ್ನಾ ಮತ್ ವಾರ್ನಿಂಗ್ ನಹಿ ದಿ''ಎನ್ನುವ ಡೈಲಾಗ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.