ಕರ್ನಾಟಕ

karnataka

ETV Bharat / sitara

ನಟ ಸಲ್ಮಾನ್ ಖಾನ್ ಅಭಿನಯದ 'ಮೇನ್ ಚಲಾ' ಸಾಂಗ್​ ರಿಲೀಸ್​​.. - ಗಾಯಕ ಗುರು ರಾಂಧವ ಹೊಸ ಸಾಂಗ್

ಸಲ್ಮಾನ್ ಖಾನ್ ಮತ್ತು ಭೂಷಣ್ ಕುಮಾರ್ ನಿರ್ಮಾಣದ 'ಮೇನ್ ಚಲಾ' ಲವ್​ ಸಾಂಗ್​​ ಇಂದು ಯೂಟ್ಯೂಬ್​ನ ಟಿ-ಸಿರೀಸ್​ನಲ್ಲಿ ಬಿಡುಗಡೆಗೊಂಡಿದೆ..

salman khan Main Chala Song Release in T-Series YouTube channel
ನಟ ಸಲ್ಮಾನ್ ಖಾನ್ ಅಭಿನಯುದ 'ಮೇನ್ ಚಲಾ' ಸಾಂಗ್​ ರಿಲೀಸ್

By

Published : Jan 22, 2022, 12:40 PM IST

ಹೈದರಾಬಾದ್: ಗಾಯಕ ಗುರು ರಾಂಧವ ಮತ್ತು ಲುಲಿಯಾ ವಂತೂರ್ ಹಾಡಿರುವ 'ಮೇನ್ ಚಲಾ' ಲವ್​ ಸಾಂಗ್​​ ಇಂದು ಬಿಡುಗಡೆಗೊಂಡಿದೆ.

ಬಾಲಿವುಡ್​ ನಟ ಸಲ್ಮಾನ್ ಖಾನ್ ಜೊತೆಯಲ್ಲಿ ಪ್ರಗ್ಯಾ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಸಲ್ಮಾನ್ ಖಾನ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದರೆ, ಶಬೀನಾ ಖಾನ್ ನಿರ್ದೇಶಿಸಿದ್ದಾರೆ. ಹಾಡನ್ನು ಶಬ್ಬೀರ್ ಅಹ್ಮದ್ ರಚಿಸಿದ್ದಾರೆ.

ಗಾಯಕ ಗುರು ರಾಂಧವ ಸಾಮಾಜಿಕ ಜಾಲತಾಣದಲ್ಲಿ ಹಾಡಿನ ತುಣಕನ್ನು ಹಂಚಿಕೊಂಡಿದ್ದಾರೆ. ಇನ್ನೂ ಸಲ್ಮಾನ್ ಖಾನ್ ಸಹ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಾಡಿನ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ಲೂಲಿಯಾ ವಂತೂರ್ ಅವರೊಂದಿಗೆ ಈ ಹಾಡನ್ನು ಹಾಡುತ್ತಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ, ಅವರ ಸ್ವರ ತುಂಬಾ ವಿಭಿನ್ನವಾಗಿದೆ, ಜನರು ಅದನ್ನು ಇಷ್ಟಪಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಗಾಯಕ ಗುರು ರಾಂಧವ ಈ ಮೊದಲೇ ಹೇಳಿಕೊಂಡಿದ್ದರು.

ಇದನ್ನೂ ಓದಿ:ಗೆಹ್ರೈಯಾನ್ ಟ್ರೇಲರ್ ಮೆಚ್ಚಿದ ರಣವೀರ್ ಸಿಂಗ್: ಮೈ ಬೇಬಿ ಗರ್ಲ್ ಎಂದ ನಟ

ಲೂಲಿಯಾ ವಂತೂರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮೈನ್ ಚಾಲಾ ಬಹಳ ಭಾವನಾತ್ಮಕ ಗೀತೆಯಾಗಿದೆ. ಇದು ಜನರನ್ನು ತಲುಪುತ್ತದೆ ಎಂಬ ನಂಬಿಕೆ ಇದೆ. ಗಾಯಕ ಗುರು ರಾಂಧವ ಅವರಿಗೆ ಕೃತಜ್ಞಳಾಗಿದ್ದೇನೆ. ಅವರೊಬ್ಬ ಅದ್ಭುತ ಕಲಾವಿದ ಎಂದು ತಿಳಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಭೂಷಣ್ ಕುಮಾರ್ ನಿರ್ಮಾಣದ ಈ ಹಾಡನ್ನು ಇಂದು ಯೂಟ್ಯೂಬ್​ನ ಟಿ-ಸಿರೀಸ್​ನಲ್ಲಿ ಬಿಡುಗಡೆ ಮಾಡಲಾಯಿತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details