ಕರ್ನಾಟಕ

karnataka

ETV Bharat / sitara

ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ಔತಣಕೂಟ ಏರ್ಪಡಿಸಿದ ನಟ ರಾಕೇಶ್ ಬಾಪಟ್ - ಹಿಂದಿ ಬಿಗ್ ಬಾಸ್ ಶೋ

ರಾಕೇಶ್ ಅವರು ಶಮಿತಾ ಅವರನ್ನು ನಿನ್ನೆ ಔತಣಕೂಟಕ್ಕೆ ಕರೆದೊಯ್ದಿದ್ದಾರೆ, ಮುಂಬೈನ ರೆಸ್ಟೋರೆಂಟ್‌ ಒಂದರ ಹೊರಗೆ ಈ ಜೋಡಿ ಕ್ಯಾಮರಾಗಳ ಕಣ್ಣಿಗೆ ಬಿದ್ದಿದೆ.

Raqesh Bapat shares glimpse of his first-ever date night with Shamita Shetty
ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ಔತಣಕೂಟ ಏರ್ಪಡಿಸಿದ ನಟ ರಾಕೇಶ್ ಬಾಪಟ್

By

Published : Sep 25, 2021, 12:56 PM IST

ಬಾಲಿವುಡ್ ನಟಿ ಶಮಿತಾ ಶೆಟ್ಟಿ ಮತ್ತು ಮಾಡೆಲ್/ನಟ ರಾಕೇಶ್ ಬಾಪಟ್ ಅವರ ಹೊಂದಾಣಿಕೆ ಬಿಗ್ ಬಾಸ್ ಒಟಿಟಿಯ ಚೊಚ್ಚಲ ಸೀಸನ್​​ನ ಪ್ರಮುಖ ಅಂಶಗಳಲ್ಲೊಂದಾಗಿದೆ. ಇದೀಗ ಒಟ್ಟಾಗಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಭಾರಿ ಸುದ್ದಿಯಾಗುತ್ತಿದೆ.

ಈ ಶೋ ಆಗಸ್ಟ್ 8 ರಿಂದ 42 ದಿನಗಳವರೆಗೆ ಪ್ರಸಾರವಾಗಿತ್ತು. ನಟ ರಾಕೇಶ್ ಬಾಪಟ್ ಫಿನಾಲೆಯಲ್ಲಿ ಎಲಿಮಿನೇಟ್ ಆದರು. ಶಮಿತಾ ಶೆಟ್ಟಿ ಎರಡನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಸೀಸನ್‌ 15ರ ಟಿವಿ ಶೋಗೆ ಎಂಟ್ರಿ ಪಡೆದಿದ್ದಾರೆ.

ರಾಕೇಶ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ ನಲ್ಲಿ ಹಾಕಿಕೊಂಡ ಪೋಸ್ಟ್

ಬಿಗ್ ಬಾಸ್ ಸೀಸನ್‌ 15ರ ಟಿವಿ ಶೋಗೆ ತೆರಳುವ ಮುನ್ನ, ರಾಕೇಶ್ ಅವರು ಶಮಿತಾ ಅವರನ್ನು ನಿನ್ನೆ ಔತಣಕೂಟಕ್ಕೆ ಕರೆದೊಯ್ದಿದ್ದಾರೆ. ಮುಂಬೈನ ರೆಸ್ಟೋರೆಂಟ್‌ ಒಂದರ ಹೊರಗೆ ಈ ಜೋಡಿ ಕ್ಯಾಮರಾಗಳ ಕಣ್ಣಿಗೆ ಬಿದ್ದಿದ್ದಾರೆ.

ಇನ್ನೂ ರಾಕೇಶ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ, ಶಮಿತಾ ಅವರ ಕೈ ಹಿಡಿದಿರುವ ಕ್ಲೋಸ್​ ಅಪ್​ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. "U & I"#Shara ಎಂದು ಬರೆಯುವುದರ ಜೊತೆಗೆ ರೆಡ್​ ಹಾರ್ಟ್ ಇಮೋಜಿ ಹಾಕಿ ಶಮಿತಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಬಿಗ್​ಬಾಸ್​ ಹೊಸ ಸೀಸನ್ ಅಕ್ಟೋಬರ್ 2 ರಂದು ರಾತ್ರಿ 9.30 ಕ್ಕೆ ಮತ್ತು ನಂತರ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಮತ್ತು ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ.

ABOUT THE AUTHOR

...view details