ಕರ್ನಾಟಕ

karnataka

ETV Bharat / sitara

ತೆರೆಗೆ ಅಪ್ಪಳಿಸಿದ ರಾಧೆ ಶ್ಯಾಮ್​: ಕ್ಲೈಮ್ಯಾಕ್ಸ್​ ಬಗ್ಗೆ ನೆಟಿಜನ್​​​ ಫುಲ್​ ಖುಷ್​! - ರಾಧೆ ಶ್ಯಾಮ್ ಟ್ವಿಟ್ಟರ್​ ಟ್ರೆಂಡ್​

ಬಹು ನಿರೀಕ್ಷೆಯ ನಂತರ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ಇಂದು ದೊಡ್ಡ ತೆರೆಗೆ ಅಪ್ಪಳಿಸಿದೆ. ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ನೆಟಿಜನ್‌ಗಳು ಪಾಸಿಟಿವ್​ ರಿಯಾಕ್ಷನ್​ ನೀಡಿರುವುದರಿಂದ ಚಿತ್ರತಂಡಕ್ಕೆ ಸಂತಸ ನೀಡಿದೆ.

Radhe Shyam Twitter review  radhe shyam review  radhe shyam reactions  radhe shyam response  radhe shyam latest news  radhe shyam updates  ರಾಧೆ ಶ್ಯಾಮ್ ಚಿತ್ರದ ರಿವ್ಯೂ  ರಾಧೆ ಶ್ಯಾಮ್ ಚಿತ್ರದ ಬಗ್ಗೆ ನೆಟಿಜನ್​ ಮಾತು  ರಾಧೆ ಶ್ಯಾಮ್ ಟ್ವಿಟ್ಟರ್​ ಟ್ರೆಂಡ್​ ರಾಧೆ ಶ್ಯಾಮ್ ನಟ ಪ್ರಭಾಸ್​
ಕ್ಲೈಮ್ಯಾಕ್ಸ್​ ಬಗ್ಗೆ ನೆಟಿಜನ್​ ಫುಲ್​ ಖುಷ್​

By

Published : Mar 11, 2022, 2:04 PM IST

ಹೈದರಾಬಾದ್ (ತೆಲಂಗಾಣ):ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ಇಂದು ತೆರೆಗೆ ಅಪ್ಪಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ಮತ್ತು ವಿಮರ್ಶೆಗಳು ಸುರಿಯಲಾರಂಭಿಸಿವೆ.

ರಾಧಾ ಕೃಷ್ಣ ಕುಮಾರ್ ಬರೆದು ನಿರ್ದೇಶಿಸಿದ ರಾಧೆ ಶ್ಯಾಮ್ ಒಂದು ಅವಧಿಯ ಪ್ರಣಯ ಕಥೆಯಾಗಿದೆ. ಇದು ವಿಧಿ ಮತ್ತು ಪ್ರೀತಿಯ ನಡುವಿನ ಸಂಘರ್ಷದ ನಡುವೆ ಈ ಕಥೆ ಸುತ್ತುತ್ತದೆ. ರಾಧೆ ಶ್ಯಾಮ್ ಪ್ರಚಾರದ ಸಮಯದಲ್ಲಿ ಪ್ರಭಾಸ್ ತಮ್ಮ ಅಭಿಮಾನಿಗಳನ್ನು ರಂಜಿಸಲು ‘ಎಲ್ಲವನ್ನೂ ಮಾಡುತ್ತೇನೆ’ ಎಂದು ಹೇಳಿದ್ದರು. ನಟ ಪ್ರಭಾಸ್​ ತನ್ನ ಅಭಿಮಾನಿಗಳ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಇಂದು ರಾಧೆ ಶ್ಯಾಮ್​ ಚಿತ್ರ ದೊಡ್ಡ ಪರದೆಯ ಮೇಲೆ ಹಿಟ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್​ ಸೃಷ್ಟಿಸುತ್ತಿದೆ.

ಓದಿ:ನಿಮ್ಮ ಪಕ್ಷದ ಲೀಡರ್​ ಯಾರು? ಕಾಂಗ್ರೆಸ್​​​ಗೆ ಬಿಎಸ್​​​ವೈ ಪ್ರಶ್ನೆ:ನಿಮ್ಮ ಬಗ್ಗೆ ಈಗಾಗಲೇ ಜನ ತೀರ್ಮಾನ ಮಾಡಿದಾರೆ ಎಂದು ಸಿದ್ದು ಟಾಂಗ್​

ರಾಧೆ ಶ್ಯಾಮ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ನೆಟಿಜನ್‌ಗಳು ಪ್ರಭಾಸ್ ಮತ್ತು ಪೂಜಾ ಅಭಿನಯದ ಚಿತ್ರವನ್ನು ಮೆಚ್ಚಿದ್ದಾರೆ. ರಾಧೆ ಶ್ಯಾಮ್‌ಗೆ ಹಿನ್ನೆಲೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಥಮನ್ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮೊದಲ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ನಟ ಸುಶಾಂತ್ ಅವರು ರಾಧೆ ಶ್ಯಾಮ್ ಚಿತ್ರತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಆದ್ರೆ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಹೊರ ಬರುತ್ತಿವೆ. ನಟ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಉತ್ತಮ ಲೈನ್-ಅಪ್ ಹೊಂದಿದ್ದಾರೆ. ಓಂ ರಾವುತ್ ಅವರ ಆದಿಪುರುಷ ಚಿತ್ರ ನಿರ್ಮಾಣ ಹಂತದಲ್ಲಿದ್ದು, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್​ ನಟಿಸುತ್ತಿದ್ದಾರೆ.


ABOUT THE AUTHOR

...view details