ಹೈದರಾಬಾದ್ (ತೆಲಂಗಾಣ) :ಬಾಲಿವುಡ್ನ ಖ್ಯಾತ ನಟಿ ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಅವರ ಗೆಳೆಯ ಎನಿಸಿಕೊಂಡಿರುವ ಆಕಾಶ್ ಮೆಹ್ತಾ ಹುಟ್ಟುಹಬ್ಬಕ್ಕೆ ಧಡಕ್ ಬೆಡಗಿ ಜಾಹ್ನವಿ ವಿಶೇಷವಾಗಿ ಶುಭಕೋರಿದ್ದಾರೆ.
ಜಾಹ್ನವಿ ಕಪೂರ್ ತಮ್ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಹಳೆಯ ಫೋಟೋಸ್ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಜಾಹ್ನವಿ ಮತ್ತು ಖುಷಿ, ಆಕಾಶ್ ಮೆಹ್ತಾ ಅವರೊಂದಿಗೆ ಪೋಸ್ ನೀಡುತ್ತಿರುವ ಪೋಟೋ ಹಾಕಿ ಬರ್ತ್ ಡೇ ಶುಭಾಶಯ ತಿಳಿಸಿದ್ದಾರೆ. ' ಹ್ಯಾಪಿ ಬರ್ತ್ ಡೇ @ ಆಕಾಶ್ ಮೆಹ್ತಾ, ನಾವು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ.