ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಅವರು ಕೆಲವರ ಅಂತ್ಯಕ್ರಿಯೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಹರಾಜಿಗೆ ಹಾಕಿದ್ದು, ನೆಟಿಜನ್‌ಗಳು ಟ್ರೋಲ್ ಮಾಡುತ್ತಿದ್ದಾರೆ.
ಟ್ವಿಟರ್ ಬಳಕೆದಾರರ ಪ್ರಕಾರ, ದೀಪಿಕಾ ಪಡುಕೋಣೆ ತನ್ನ ವೆಬ್‌ಸೈಟ್‌ನಲ್ಲಿ ಎರಡು ಕುರ್ತಾಗಳನ್ನು ಹರಾಜಿಗೆ ಇಟ್ಟಿದ್ದಾರೆ. ಅವುಗಳಲ್ಲಿ ಒಂದು ಪಿಂಕ್ ಡಿಸೈನರ್ ಕುರ್ತಿಯಾಗಿದ್ದು, 2013ರಲ್ಲಿ ತನ್ನ ಹೌಸ್‌ಫುಲ್ ಸಹನಟಿ ಜಿಯಾ ಖಾನ್ ಅವರ ಅಂತ್ಯಕ್ರಿಯೆಯಂದು ಧರಿಸಿದ್ದರು. ಇನ್ನೊಂದು ಕುರ್ತಾವು ಅದೇ ವರ್ಷ ಪ್ರಿಯಾಂಕಾ ಚೋಪ್ರಾರ ತಂದೆಯ ಪ್ರಾರ್ಥನಾ ಕೂಟಕ್ಕೆ ಧರಿಸಿದ್ದ ಕುರ್ತಿಯಾಗಿದೆ.
"ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ನನ್ನ ನೆಚ್ಚಿನ ದೀಪಿಕಾ ಪಡುಕೋಣೆ 2013 ರಲ್ಲಿ ಅಂತ್ಯಕ್ರಿಯೆಗೆ ಹಾಕಿದ್ದ ಬಟ್ಟೆಗಳನ್ನು ಹರಾಜು ಹಾಕಿದ್ದಾರೆ. ಅವುಗಳನ್ನು ವಿವಿಧ ಅಂತ್ಯಕ್ರಿಯೆಗಳಿಗೆ ಧರಿಸಿದ್ದರು'' ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
ದೀಪಿಕಾ ತನ್ನ ಎನ್‌ಜಿಒ - ಲಿವ್ ಲವ್ ಲಾಫ್‌ಗಾಗಿ ಹಣವನ್ನು ಸಂಗ್ರಹಿಸಲು ನಿರ್ಧರಿಸಿದರು. ಇದು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಅದಕ್ಕಾಗಿ, ಅವರು ತಮ್ಮ ವಾರ್ಡ್ರೋಬ್ನಿಂದ ಬಟ್ಟೆ ಮತ್ತು ಪರಿಕರಗಳನ್ನು ಖರೀದಿಸಲು ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ(ಫಾಲೋವರ್ಸ್) ಪ್ರೋತ್ಸಾಹಿಸಿದರು.
ಇದೀಗ ಅಂತ್ಯಕ್ರಿಯೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಹರಾಜಿಗೆ ಹಾಕಿರುವುದನ್ನು ನೆಟಿಜನ್‌ಗಳು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್‌ಗಳು ದೀಪಿಕಾರನ್ನು ಗುರಿಯಾಗಿಸಿಕೊಂಡಾಗ, ಅವರ ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ. ಒಳ್ಳೆಯ ಉದ್ದೇಶಗಳಿಗಾಗಿ ಅವರ ಕಾರ್ಯ ಎಂದು ಶ್ಲಾಘಿಸಿದ್ದಾರೆ.