ಹೈದರಾಬಾದ್(ತೆಲಂಗಾಣ):ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಬಹುತಾರಾಗಣದ ಬಾಲಿವುಡ್ನ 'ಸೂರ್ಯವಂಶಿ'(Suryavanshi) ನ. 05ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿದೆ. ಆದರೆ, ಈ ಯಶಸ್ಸಿನ ಸಂಭ್ರಮಾಚರಣೆ ಬದಲು ತಮ್ಮ ಮುಂದಿನ ಚಿತ್ರಕ್ಕೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ಸಖತ್ ಬ್ಯುಸಿಯಾಗಿದ್ದಾರೆ.
ಕೋವಿಡ್ - ಲಾಕ್ಡೌನ್ ನಂತರ ಬಾಲಿವುಡ್ ಚಿತ್ರ ಉದ್ಯಮ ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರವಾಗಿರುವ ಈ ಚಿತ್ರದ ಯಶಸ್ಸು ಆಚರಿಸಲು ನಟ ಇನ್ನೂ ಸಮಯ ತೆಗೆದುಕೊಂಡಿಲ್ಲ. ಬದಲಾಗಿ ಮುಂಬರುವ ಚಿತ್ರ ರಾಮ್ ಸೇತು( Ram Setu ) ಚಿತ್ರೀಕರಣಕ್ಕೆ ಸಹನಟಿ ಜಾಕ್ವೆಲಿನ್ ಫರ್ನಾಂಡೀಸ್( Jacqueline Fernandez) ಜೊತೆ ನಟ ಅಕ್ಷಯ್ ಕುಮಾರ್ ಹೊರಟಿದ್ದಾರೆ.