ಹೈದರಾಬಾದ್(ತೆಲಂಗಾಣ) :ಕಿರುತೆರೆ ಹಾಗೂ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ತನ್ನ ಗೆಳೆಯ ವಿಕ್ಕಿ ಜೈನ್ ಜೊತೆ ಡಿ.14ರಂದು ವಿವಾಹವಾಗಲಿದ್ದಾರೆ. ಇಬ್ಬರ ಮನೆಗಳಲ್ಲೂ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಆದ್ರೆ, ನಿನ್ನೆ ರಾತ್ರಿ ವಧುವಿನ ಕಾಲು ಉಳುಕಿದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕಿರುತೆರೆಯ ಹಿಟ್ ಧಾರಾವಾಹಿ ‘ಪವಿತ್ರ ರಿಷ್ತಾ’ ಮೂಲಕ ಮನೆಮಾತಾಗಿರುವ ನಟಿ ಅಂಕಿತಾ ಲೋಖಂಡೆ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳು ಇವರನ್ನು ಜೋಡಿಯಾಗಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಆದ್ರೆ, ದುರದೃಷ್ಟಕರ ಎನ್ನುವಂತೆ ಅಂಕಿತಾ ಅವರ ಕಾಲು ಉಳುಕಿ ನಿನ್ನೆ ರಾತ್ರಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ನಂತರ ಅಂಕಿತಾ ಲೋಖಂಡೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದರೂ ಕೂಡ ಹೆಚ್ಚು ಆಯಾಸ ಪಡಬೇಡಿ ಮತ್ತು ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮದುವೆಯ ಸಂಭ್ರಮದಲ್ಲಿ ಲವಲವಿಕೆಯಿಂದ ಇರಬೇಕಾದ ಮದುಮಗಳೀಗ ಜಾಗೃತೆವಹಿಸಿ ಹೆಜ್ಜೆ ಹಾಕಬೇಕಿದೆ.
ಈ ವಾರದ ಆರಂಭದಲ್ಲಿ ವಿಕ್ಕಿ ಮತ್ತು ಅಂಕಿತಾ ತಮ್ಮ ಮದುವೆಗೆ ಆಹ್ವಾನಿಸಲು ಮಹಾರಾಷ್ಟ್ರದ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಲು ಹೋಗಿದ್ದರು. ಕೊಶ್ಯಾರಿ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಅಂಕಿತಾ ಮತ್ತು ವಿಕ್ಕಿ, ತಮ್ಮೊಂದಿಗೆ ಸಮಯ ಕಳೆದಿದ್ದಕ್ಕಾಗಿ ಗವರ್ನರ್ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಂಕಿತಾ ಮತ್ತು ವಿಕ್ಕಿ 2019ರಿಂದ ಪ್ರೀತಿಸುತ್ತಿದ್ದಾರೆ. 2020ರಲ್ಲಿ ವಿವಾಹವಾಗಲು ಯೋಜಿಸುತ್ತಿದ್ದರು. ಆದ್ರೆ, ಕೋವಿಡ್ ಹಿನ್ನೆಲೆ ಮದುವೆಯನ್ನು ಮುಂದೂಡಲಾಗಿತ್ತು. ಈಗ ಡಿ.14ರಂದು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ವಿವಾಹವಾಗಲಿದ್ದಾರೆ.
ಇದನ್ನೂ ಓದಿ:ವಿಕ್ಕಿ ಜೈನ್ ಜೊತೆಗೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಅಂಕಿತಾ ಲೋಖಂಡೆ : ಈ ತಿಂಗಳಲ್ಲೇ ಮದುವೆ
ಈ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್‌ನ ಕೆಲವು ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂಕಿತಾ ಮರೂನ್ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ವಿಕ್ಕಿ ಜೈನ್ ಕೂಡ ಕಪ್ಪು ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.