'ಪೈಲ್ವಾನ್' ಚಿತ್ರ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಉತ್ತರ ಭಾರತಾದ್ಯಂತ ಪೈಲ್ವಾನ್ ವಿತರಣೆಯ ಹಕ್ಕು ಝೀ ಸ್ಟುಡಿಯೋ ಸಂಸ್ಥೆಯ ಪಾಲಾಗಿದೆ.
ಅಭಿಮಾನಿಗಳಿಗೆ ಬಿಗ್ ನ್ಯೂಸ್ ಕೊಟ್ಟ ಪೈಲ್ವಾನ್ - ಝೀ ಸ್ಟುಡಿಯೋ
ಕಿಚ್ಚ ಸುದೀಪ್ ದೇಹ ಹುರಿಗೊಳಿಸಿ, ಕಟ್ಟುಮಸ್ತಾದ ದೇಹ ಕಟ್ಟಿಕೊಂಡು ಅಭಿನಯಿಸಿರುವ 'ಪೈಲ್ವಾನ್' ಚಿತ್ರದ ಹಿಂದಿ ಆವತರಣಿಕೆಯ ಬಿಡುಗಡೆ ಹಕ್ಕು ಝೀ ಸ್ಟುಡಿಯೋ ಪಡೆದುಕೊಂಡಿದೆ.
![ಅಭಿಮಾನಿಗಳಿಗೆ ಬಿಗ್ ನ್ಯೂಸ್ ಕೊಟ್ಟ ಪೈಲ್ವಾನ್ ](https://etvbharatimages.akamaized.net/etvbharat/prod-images/768-512-3796834-thumbnail-3x2-sudeep.jpg)
ಪೈಲ್ವಾನ್
ಪ್ಯಾನ್ ಇಂಡಿಯಾ ಸಿನಿಮಾ ಪೈಲ್ವಾನ್ ತೆರೆಗೆ ತರುವ ಕಾರ್ಯ ಭರದಿಂದ ಸಾಗಿದೆ. ಬಹುಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಪೈಲ್ವಾನ್ ಹಿಂದಿ ಆವತರಣೆಕೆ ರಿಲೀಸ್ನ ಹೊಣೆ ಪ್ರತಿಷ್ಠಿತ ಝೀ ಸ್ಟುಡಿಯೋ ವಹಿಸಿಕೊಂಡಿದೆ. ನಾರ್ಥ್ ಇಂಡಿಯಾ ರಾಜ್ಯಗಳಲ್ಲಿ ಪೈಲ್ವಾನ್ ಪರಿಚಯಿಸುವ ಕಾರ್ಯ ಝೀ ಸ್ಟುಡಿಯೋದಿಂದ ನಡೆಯಲಿದೆ.
ಇನ್ನು ಕನ್ನಡದ ವಿತರಣೆಯ ಹಕ್ಕುಗಳನ್ನು ಕೆಆರ್ಜಿ ಸ್ಟುಡಿಯೋದ ಕಾರ್ತೀಕ ಗೌಡ ಪಡೆದುಕೊಂಡಿದ್ದಾರೆ. ಕರ್ನಾಟಕದ ಎಲ್ಲ ಚಿತ್ರಮಂದಿರಗಳಲ್ಲಿ 'ಪೈಲ್ವಾನ್' ಬಿಡುಗಡೆ ಮಾಡುವ ಜವಾಬ್ದಾರಿ ಇವರ ಹೆಗಲ ಮೇಲಿದೆ.