ವಂಚನೆ ಆರೋಪ ಎದುರಿಸುತ್ತಿರುವ ಯುವರಾಜ್ ಸ್ವಾಮಿ ಪ್ರಕರಣದಲ್ಲಿ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಿನ್ನೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ರು. ರಾಧಿಕಾ ಕುಮಾರಸ್ವಾಮಿ ಜತೆ ಹಣಕಾಸು ವ್ಯವಹಾರ ಬಹಿರಂಗಗೊಂಡ ಬಳಿಕ ಈಗ ವಂಚಕ ಯುವರಾಜ್ ಸ್ನೇಹ ವಲಯದಲ್ಲಿ ಮತ್ತೆ ಎಂಟಕ್ಕೂ ಹೆಚ್ಚು ನಟಿಯರ ಹೆಸರು ಕೇಳಿಬಂದಿದ್ದು, ಆ ನಟಿಮಣಿಯರಿಗೆ ಕೂಡ ಸಿಸಿಬಿ ತನಿಖೆಯ ನಡುಕ ಹುಟ್ಟಿದೆ ತಿಳಿದುಬಂದಿದೆ.
ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಕನ್ನಡದ 8 ಜನ ನಟಿಮಣಿಯರಿಗೆ ಯುವರಾಜ್ ಗಾಳ ಹಾಕಿರುವುದಾಗಿ ಸಿಸಿಬಿ ವಿಚಾರಣೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲಾ.. ಆ ನಟಿಯರನ್ನು ಮುಂದಿಟ್ಟು ರಾಜಕಾರಣಿಗಳನ್ನು ಸೆಳೆದಿರಬಹುದು ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಆರೋಪಿ ಯುವರಾಜ್ ಸ್ವಾಮಿ ಎಂಟು ಜನ ನಟಿಮಣಿಯರ ಅಕೌಂಟ್ಗೆ ಲಕ್ಷ, ಲಕ್ಷ ರೂಪಾಯಿ ಹಣ ಸಂದಾಯವಾಗಿದೆ ಎಂಬ ಅನುಮಾನಗಳು ಮೂಡಿವೆ.
ಜ್ಯೋತಿಷ್ಯ ಹಾಗೂ ರಾಜಕೀಯ ವಲಯದಲ್ಲಿ ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಯುವರಾಜ್ ಸ್ವಾಮಿ, ಶಾಸ್ತ್ರ ಹೇಳುವ ನೆಪದಲ್ಲಿ ಚಿತ್ರರಂಗದವರ ಸ್ನೇಹ ಮಾಡಿದ್ದಾನೆ. ಬಳಿಕ ಕೆಲವು ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರಿಗೆ ಸಿನಿಮಾ ನಿರ್ಮಾಣ ಮಾಡುವುದಾಗಿ ಆಸೆ ತೋರಿಸಿದ್ದಾನೆ ಎಂಬುದು ಗೊತ್ತಾಗಿದೆ. ಹಾಗಾದ್ರೆ ಯಾವ ಯಾವ ನಟಿಮಣಿಯ ಅಕೌಂಟ್ಗೆ ಹಣ ಸಂದಾಯ ಆಗಿದೆ? ಯಾರೆಲ್ಲ ಚೆಂದುಳ್ಳಿ ಚೆಲುವೆಯರು ಯುವರಾಜ್ ಸ್ವಾಮಿ ಸಂಪರ್ಕದಲ್ಲಿದ್ದಾರೆ ಅನ್ನೋದು ಈಗ ಕುತೂಹಲದ ವಿಷಯವಾಗಿದೆ.
ಸದ್ಯ ಟಾಪ್ ಸ್ಯಾಂಡಲ್ ವುಡ್ ಹೀರೋಯಿನ್ಗಳಿಗೆ ಹಣ ಸಂದಾಯ ಆಗಿದೆ ಎನ್ನಲಾಗಿದೆ. ಜೊತೆಗೆ ಯುವರಾಜ್ ಹಾಗೂ ಆತನ ಬೇನಾಮಿಗಳಿಂದ ನಟಿಯರಿಗೆ ಹಣ ಟ್ರಾನ್ಸಫರ್ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಸಿನಿಮಾಗೆ ಅಂತಾ ಯಾವ ನಟಿಯೂ ದುಡ್ಡು ಪಡೆದು ಅಗ್ರಿಮೆಂಟ್ ಮಾಡ್ಕೊಂಡಿಲ್ಲ ಎಂಬುದು ತಿಳಿದು ಬಂದಿದೆ. ಹಾಗಾದ್ರೆ ಯಾರೆಲ್ಲ ನಟಿಮಣಿಯರು ಅಗ್ರಿಮೆಂಟ್ ಇಲ್ಲದೆ ಯುವರಾಜ್ನಿಂದ ಹಣ ಪಡೆದಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಹೀಗಾಗಿ ಕನ್ನಡದಲ್ಲಿ ಎಂಟು ಜನ ನಟಿಮಣಿಯರ ಎದೆಯಲ್ಲಿ ಡವ ಡವ ಶುರುವಾಗಿದೆ. ಆದರೆ ಯಾವ ಯಾವ ನಟಿಮಣಿಯರಿಗೆ ಸಿಸಿಬಿ ಬುಲಾವ್ ಹೇಳಲಿದೆ ಸದ್ಯದಲ್ಲೇ ಗೊತ್ತಾಗಲಿದೆ.