ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವರತ್ನ' ದ ಶೂಟಿಂಗ್ ಮುಗಿದಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇಂದು ಹೊಸ ವರ್ಷದ ವಿಶೇಷವಾಗಿ ಚಿತ್ರತಂಡ, ಪುನೀತ್ ರಾಜ್‌ಕುಮಾರ್ ಅವರ ಹೊಸ ಲುಕ್ ಬಿಡುಗಡೆ ಮಾಡುತ್ತಿದೆ.
ಹೊಸ ವರ್ಷದಂದೇ ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ 'ಯುವರತ್ನ' ತಂಡ - ಶೂಟಿಂಗ್ ಮುಗಿಸಿದ ಯುವರತ್ನ
'ಯುವರತ್ನ' ಚಿತ್ರದ ಪೋಸ್ಟರ್ನಲ್ಲಿ ಅಸ್ಥಿಪಂಜರದ ಫೋಟೋವೊಂದನ್ನು ಹಾಕಿ, ಹೊಸ ವರ್ಷಕ್ಕೆ ನಿಮಗೆಲ್ಲಾ ಗುಡ್ ನ್ಯೂಸ್ ಎಂದು ಹೇಳಿಕೊಂಡಿದೆ ಚಿತ್ರತಂಡ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ.
'ಯುವರತ್ನ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಜೊತೆಗೆ ರಗ್ಬಿ ಆಟಗಾರನಾಗಿ ಕೂಡಾ ಗಮನ ಸೆಳೆದಿದ್ದಾರೆ. ಈ ಲುಕ್ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಇದೀಗ 'ಯುವರತ್ನ' ಚಿತ್ರದ ಪೋಸ್ಟರ್ನಲ್ಲಿ ಅಸ್ಥಿಪಂಜರದ ಫೋಟೋವೊಂದನ್ನು ಹಾಕಿ, ಹೊಸ ವರ್ಷಕ್ಕೆ ನಿಮಗೆಲ್ಲಾ ಗುಡ್ ನ್ಯೂಸ್ ಎಂದು ಹೇಳಿದೆ ಚಿತ್ರತಂಡ.
ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಪುನೀತ್ ಜೊತೆ ನಾಯಕಿಯಾಗಿ ಸಯೇಷ ಸೈಗಲ್ ನಟಿಸಿದ್ದಾರೆ. ಇವರೊಂದಿಗೆ ಸೋನು ಗೌಡ, ಧನಂಜಯ, ವಸಿಷ್ಠಸಿಂಹ, ಸುಧಾರಾಣಿ, ಸಾಯಿಕುಮಾರ್ ಹಾಗೂ ಇನ್ನಿತರರ ಪೋಷಕರ ದಂಡೇ ಚಿತ್ರದಲ್ಲಿದೆ. ರಾಜಕುಮಾರ ಚಿತ್ರದ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಯುವರತ್ನ' ಏಪ್ರಿಲ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.