ಕರ್ನಾಟಕ

karnataka

ETV Bharat / sitara

ಅಪ್ಪು ಬರ್ತ್​​ಡೇ  ಸರ್​ಪ್ರೈಸ್​ ಕೊಡ್ತಿದ್ದಾರೆ ನಿರ್ದೇಶಕ ಸಂತೋಷ! - undefined

ಇದೇ 17 ರಂದು ನಟ ಪುನೀತ್ ರಾಜಕುಮಾರ್​ 44 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಂದು ಯುವರತ್ನ ಚಿತ್ರದ ಫಸ್ಟ್ ಲುಕ್​ ಬಿಡುಗಡೆಯಾಗಲಿದೆ. ಇದರ ಜತೆಗೆ ನಟಸಾರ್ವಭೌಮ ನಿರ್ದೇಶಕ ಪವನ್ ಒಡೆಯರ್​ ಕೂಡ ಅಪ್ಪುಗೆ ಒಂದು ಸರ್​ಪ್ರೈಸ್​ ನೀಡಲು ರೆಡಿಯಾಗಿದ್ದಾರೆ.

ಅಪ್ಪು ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್​

By

Published : Mar 14, 2019, 12:50 PM IST

ಪವರ್ ಸ್ಟಾರ್ ಪುನೀತ್​ ರಾಜಕುಮಾರ್​ ಬರ್ತ್ ಡೇಗೆ ಇನ್ನೆರಡೇ ದಿನ ಬಾಕಿ. ಈ ರಾಜಕುಮಾರನ ಹುಟ್ಟು ಹಬ್ಬಕ್ಕೆ ಯುವರತ್ನ ಚಿತ್ರ ತಂಡದಿಂದ ಭರ್ಜರಿ ಗಿಫ್ಟ್​ ರೆಡಿಯಾಗಿದೆ.

ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ ಯುವರತ್ನ ಚಿತ್ರತಂಡ ಅಪ್ಪುಗೆ ಸರ್​​ಪ್ರೈಸ್ ನೀಡಲು ಪ್ಲಾನ್ ಮಾಡಿದೆ. ಅಪ್ಪು ಬರ್ತ್ ಡೇಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಫುಲ್​ ಸ್ಟೈಲಿಶ್​​ ಆ್ಯಂಡ್ ಮಾಸ್​ ಆಗಿರೋ ಫಸ್ಟ್ ಲುಕ್​ ಇದೇ 17 ರಂದು ರಿಲೀಸ್ ಆಗಲಿದೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್​ ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಅಪ್ಪು ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್​

ಇನ್ನು ರಾಜಕುಮಾರ ಚಿತ್ರದ ನಂತರ ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ಯುವರತ್ನ ಚಿತ್ರದಲ್ಲಿ ಒಂದಾಗಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್​​ನಡಿ ವಿಜಯ್ ಕಿರಗಂದೂರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪವರ್ ಸ್ಟಾರ್​​​ಗೆ ಜೋಡಿಯಾಗಿ ಸಯೇಶಾ ಸೈಗಲ್, ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಈಗಾಗಲೇ ಯುವರತ್ನ ಶೂಟಿಂಗ್ ಶುರುವಾಗಿದೆ.

For All Latest Updates

TAGGED:

ABOUT THE AUTHOR

...view details