ಕರ್ನಾಟಕ

karnataka

ETV Bharat / sitara

ಧಾರಾವಾಹಿ ಪ್ರಿಯರಿಗೆ ಗುಡ್​ನ್ಯೂಸ್​ ಮರು ಪ್ರಸಾರವಾಗಲಿವೆ ನಿಮ್ಮ ನೆಚ್ಚಿನ ಸೀರಿಯಲ್ಸ್​​..

ಲಾಕ್ ಡೌನ್ ನಿಂದಾಗಿ ಎರಡು ವಾರಗಳಿಂದ ಮನೆಯಲ್ಲೇ ಇರುವ ಜನರು ಸಮಯ ಕಳೆಯುವುದಕ್ಕಾಗಿ ಧಾರಾವಾಹಿ ನೋಡುತ್ತಿದ್ದರು. ಇದೀಗ ಅದು ಮುಗಿದು ಹೋದರೆ ಉಳಿದ ಒಂದು ವಾರ ಕಳೆಯುವುದು ಹೇಗೆ ಎಂಬ ಚಿಂತೆ ಅವರಿಗೆ ಕಾಡದಿರದು. ಆದರೆ ಅದಕ್ಕೆ ಚಿಂತಸಬೇಕಗಿಲ್ಲ, ಕೆಲವೊಂದು ಧಾರಾವಾಹಿ ಮತ್ತೆ ಮರು ಪ್ರಸಾರ ಕಾಣಲಿವೆ.

Your favorite serials to be re-aired
ಮರು ಪ್ರಸಾರವಾಗಲಿವೆ ನಿಮ್ಮ ನೆಚ್ಚಿನ ಸೀರಿಯಲ್ಸ್​​

By

Published : Apr 5, 2020, 10:07 AM IST

ಲಾಕ್‌ಡೌನ್‌ನ ಕಾರಣದಿಂದಾಗಿ ಎಲ್ಲವೂ ಬಂದ್ ಆಗಿರುವುದು ನಮಗೆ ತಿಳಿದೇ ಇದೆ. ಸೀರಿಯಲ್ಸ್​ ಚಿತ್ರೀಕರಣವಂತೂ ಕಂಪ್ಲೀಟ್ ನಿಂತಿದೆ. ಇದ್ದಂತಹ ಫ್ರೆಶ್ ಎಪಿಸೋಡ್‌ಗಳು ಶುಕ್ರವಾರಕ್ಕೆ ಖಾಲಿಯಾಗಿದೆ. ಅದಕ್ಕೆ ಕಾರಣವೂ ಇದೆ, ಲಾಕ್‌ಡೌನ್‌ನಿಂದಾಗಿ ಎರಡು ವಾರಗಳಿಂದ ಮನೆಯಲ್ಲೇ ಇರುವ ಜನರು ಸಮಯ ಕಳೆಯುವುದಕ್ಕಾಗಿ ಧಾರಾವಾಹಿ ನೋಡುತ್ತಿದ್ದರು. ಇದೀಗ ಅದು ಮುಗಿದು ಹೋದರೆ ಉಳಿದ ಒಂದು ವಾರ ಕಳೆಯುವುದು ಹೇಗೆ ಎಂಬ ಚಿಂತೆ ಅವರಿಗೆ ಕಾಡದಿರದು. ಆದರೆ, ಅದಕ್ಕೆ ಚಿಂತಸಬೇಕಗಿಲ್ಲ, ಕೆಲ ಧಾರಾವಾಹಿ ಮತ್ತೆ ಮರು ಪ್ರಸಾರ ಕಾಣಲಿವೆ.

ಮರು ಪ್ರಸಾರವಾಗಲಿವೆ ನಿಮ್ಮ ನೆಚ್ಚಿನ ಸೀರಿಯಲ್ಸ್​​

ಕಲರ್ಸ್ ಕನ್ನಡದಲ್ಲಿ ಈ ವರ್ಷವೇ ಆರಂಭವಾದ ಕನ್ನಡತಿ, ಗೀತಾ ಮತ್ತು ನನ್ನರಸಿ ರಾಧೆ ಧಾರಾವಾಹಿಗಳು ಮತ್ತೆ ಮೊದಲ ಸಂಚಿಕೆಯಿಂದ ಮರುಪ್ರಸಾರ ಕಾಣಲಿದೆ. ಕಲರ್ಸ್ ಸೂಪರ್ ನಲ್ಲಿ ಪ್ರತಿ ದಿನ ಪ್ರಸಾರವಾಗುತ್ತಿರುವ ಹಳ್ಳಿಯ ಸೊಗಡಿನ ಕಥಾ ಹಂದರದ ಭೂಮಿ ತಾಯಾಣೆ ಮತ್ತು ಹಾಸ್ಯದ ರಸದೌತಣವನ್ನೇ ಉಣಬಡಿಸುತ್ತಿದ್ದ ಸಿಲ್ಲಿಲಲ್ಲಿ ಧಾರಾವಾಹಿ ಕೂಡಾ ಮೊದಲ ಸಂಚಿಕೆಯಿಂದ ಮರುಪ್ರಸಾರ ಕಾಣಲಿದೆ.

ಮರು ಪ್ರಸಾರವಾಗಲಿವೆ ನಿಮ್ಮ ನೆಚ್ಚಿನ ಸೀರಿಯಲ್ಸ್​​

ಈ ಲಾಕ್‌ಡೌನ್ ಸಮಯದಲ್ಲಿ ಜೊತೆಜೊತೆಯಲಿ ವೀಕ್ಷಕರಿಗಂತೂ ಸಂತಸದ ವಿಚಾರವಿದೆ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪಟ್ಟಿಗೆ ನೂತನವಾಗಿ ಸೇರಿದ್ದ ಜೊತೆಜೊತೆಯಲಿ ಇತ್ತೀಚೆಗಷ್ಟೇ 450 ಸಂಚಿಕೆಗಳನ್ನು ಪೂರೈಸಿತ್ತು. ಈ 450 ಸಂಚಿಕೆಗಳನ್ನು ಮಗದೊಮ್ಮೆ ನೋಡುವ ಅವಕಾಶ ಬಂದಿದೆ. ಅದು ಕೂಡಾ ಪ್ರತಿ ರಾತ್ರಿ ಎರಡು ಗಂಟೆ, ಸೋಮವಾರದಿಂದ ಸಂಜೆ ಆರು ಗಂಟೆಯಿಂದ 7.30 ತನಕ ಜೊತೆಜೊತೆಯಲಿ ಧಾರಾವಾಹಿ ಪ್ರಸಾರ ಕಾಣಲಿದ್ದು. 7 ಗಂಟೆಗೆ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ 8.30ಕ್ಕೆ ಪ್ರಸಾರವಾಗಲಿದೆ.

ಮರು ಪ್ರಸಾರವಾಗಲಿವೆ ನಿಮ್ಮ ನೆಚ್ಚಿನ ಸೀರಿಯಲ್ಸ್​​

ಯಾರೆಲ್ಲಾ ಧಾರಾವಾಹಿಗಳನ್ನು ಮಿಸ್ ಮಾಡಿದ್ದರೋ, ಮತ್ತೆ ಅವೆಲ್ಲವನ್ನೂ ನೋಡುವ ಸದವಕಾಶ ಪ್ರೇಕ್ಷಕರಿಗೆ ಬಂದಿದೆ. ಆ ಮೂಲಕ ಕಳೆದು ಹೋದ ಅವಕಾಶ ಮತ್ತೆ ದೊರಕಿದೆ.

ABOUT THE AUTHOR

...view details