ಕರ್ನಾಟಕ

karnataka

ETV Bharat / sitara

ಕೊರೊನಾಗೆ ಪ್ರಾಣ ಬಿಟ್ಟ ಯುವ ನಿರ್ದೇಶಕ ನವೀನ್! - Naveen Passed Away

ಕನ್ನಡ ಚಿತ್ರರಂಗವನ್ನು ಬೆಂಬಿಡದೇ ಕಾಡುತ್ತಿರುವ ಡೆಡ್ಲಿ ವೈರಸ್​ ಕೊರೊನಾ ಈಗ ಸ್ಯಾಂಡಲ್​ವುಡ್​ನ ಮತ್ತೊಬ್ಬ ಯುವ ನಿರ್ದೇಶಕನನ್ನು ಬಲಿ ತೆಗೆದುಕೊಂಡಿದೆ. ಸಾಲು ಸಾಲು ಸಾವಿನಿಂದ ಚಂದನವನದ ನಟ - ನಟಿಯರಲ್ಲಿ ಚಿಂತೆ ಮನೆ ಮಾಡಿದೆ.

Young Director Naveen Passed Away
ಯುವ ನಿರ್ದೇಶಕ ನವೀನ್

By

Published : May 3, 2021, 7:51 PM IST

ಯುವ ನಿರ್ದೇಶಕ ನವೀನ್ ಎಂಬುವರು ಮಹಾಮಾರಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. 36 ವರ್ಷದ ನವೀನ್ ಅವರಿಗೆ ಕೆಲ ದಿನಗಳ ಹಿಂದೆಯಷ್ಟೇ ಸೋಂಕು ದೃಢವಾಗಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೋವಿಡ್‌ ಸೋಂಕು ತಗುಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಚಂದ್ರಶೇಖರ್ ನಿಧನ

ಮಂಡ್ಯ ಮೂಲದ ನವೀನ್ ಅವರು 2011ರಲ್ಲಿ ನಿರ್ದೇಶಕನಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದರು. ನಟರಾದ ಅಪ್ಪು ವೆಂಕಟೇಶ್ ಮತ್ತು ರೇವಣ್ಣ ಮುಖ್ಯಭೂಮಿಕೆಯಲ್ಲಿದ್ದ 'ಒನ್ ಡೇ' ಚಿತ್ರ ಇವರ ನಿರ್ದೇಶನದಲ್ಲಿ ಮೂಡಿ ಬಂದಿತ್ತು.

ಯುವ ನಿರ್ದೇಶಕ ನವೀನ್

ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕರಾದ ರಾಜಶೇಖರ್, ಚಂದ್ರಶೇಖರ್ ಅವರೂ ಕೋವಿಡ್ ಸೋಂಕಿನ ಕಾರಣದಿಂದ ಕೊನೆಯುಸಿರೆಳೆದಿದ್ದರು. ಈಗ ಮತ್ತೊಬ್ಬ ಯುವ ಯುವ ನಿರ್ದೇಶಕನ ಬಲಿ ತೆಗೆದುಕೊಂಡಿರುವುದು ದುರಂತವೇ ಸರಿ.

ಇದನ್ನೂ ಓದಿ: ಚಿಲ್ಲರೆ ಅಂಗಡಿ ವ್ಯಾಪಾರಿ ಕೋಟಿ ನಿರ್ಮಾಪಕ ಆಗಿದ್ದು ಹೀಗೆ..!

ಹಾಗೇ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ನವೀನ್ ಕೆಲಸ ಮಾಡಿದ್ದರು. ನವೀನ್ ಅವರ ಮೃತದೇಹವನ್ನು ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ.

ABOUT THE AUTHOR

...view details