ಕನ್ನಡ ಚಿತ್ರರಂಗದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ನಾಲ್ಕು ತಿಂಗಳು ಕಳೆಯುತ್ತಿವೆ. ಆದರೆ, ಪುನೀತ್ ರಾಜ್ಕುಮಾರ್ ತರ ಹೋಲಿಕೆ ಇರುವ ಯುವ ನಟನೊಬ್ಬ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಈ ಹಿಂದೆ ಛಾಯಾ ಸಿನಿಮಾದಲ್ಲಿ ನಟಿಸಿದ್ದ ಆನಂದ್ ಆರ್ಯ, ಈಗ ಮತ್ತೆ ಮಾರಕಾಸ್ತ್ರ ಎಂಬ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಈ ಮಾರಕಾಸ್ತ್ರ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರತಂಡದ ಸದಸ್ಯರು ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪವರ್ ಸ್ಟಾರ್ ಅವರನ್ನು ಸ್ಮರಿಸಿದರು.
ಈ ಹಿಂದೆ ಹಲವಾರು ಕಿರುಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಮೂರ್ತಿ ಸುನಾಮಿ, ಮಾರಕಾಸ್ತ್ರ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಗುರುಮೂರ್ತಿ ಹೇಳುವ ಹಾಗೆ ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ.
ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ ಮಾರಕಾಸ್ತ್ರ ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ ದೇಶದ ರಕ್ಷಣೆಗಾಗಿ ಎಂಬ ಅಡಿಬರಹವನ್ನ ಇಟ್ಟುಕೊಂಡು ಒಂದು ಸಂದೇಶ ಕೊಡೋದಿಕ್ಕೆ ಹೊರಟಿದ್ದಾರೆ ನಿರ್ದೇಶಕರು.
ಆನಂದ್ ಆರ್ಯ ಮಾತನಾಡಿ, ಈ ಸಿನಿಮಾವನ್ನ ಒಂಬತ್ತು ತಿಂಗಳ ಹಿಂದೆ ನಾನು ಒಪ್ಪಿಕೊಂಡಿದ್ದೆ, ನಾನು ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರ ಮಾಡುತ್ತೇನೆ. ಪುನೀತ್ ಸಾರ್ ಕಳೆದುಕೊಂಡಿರೋದು ದೊಡ್ಡ ನಷ್ಟ. ನಾನು ಅಪ್ಪು ಸಾರ್ ಅಭಿಮಾನಿ. ನಾನು ಅವರತರ ಹೋಲಿಕೆ ಇರುವುದರಿಂದ ತುಂಬಾ ಜನ ಕೇಳುತ್ತಾರೆ ಪುನೀತ್ರಾಜಕುಮಾರ್ ಅವರನ್ನು ಸ್ಮರಿಸಿದರು. ಆನಂದ್ ಆರ್ಯಗೆ ಜೋಡಿಯಾಗಿ ಬಳ್ಳಾರಿ ಹುಡುಗಿ ಮಾಧುರ್ಯ ಕಾಣಿಸಿಕೊಳ್ಳುತ್ತಿದ್ದಾರೆ.