ಕರ್ನಾಟಕ

karnataka

ETV Bharat / sitara

ಕಾಲೇಜು ಕಥೆಗೆ ಬಂಡವಾಳ ಹಾಕಿದ ಯೋಗರಾಜ್​​ ಭಟ್ರು: ಇಲ್ಲಿದೆ ಸಿನಿಮಾ ಹೆಸರು.. - ಯೋಗರಾಜ್​ ಭಟ್​ ನಿರ್ಮಾಪಕರಾಗಿರುವ ಪದವಿ ಪೂರ್ವ

ಯೋಗ್​ರಾಜ್​​ ಭಟ್​​​​ 'ಪದವಿ ಪೂರ್ವ' ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತು, ಪ್ರೊಡ್ಯೂಸರ್​ ಕ್ಯಾಪ್​ ಧರಿಸುತ್ತಿದ್ದಾರೆ. ಈ ಹಿಂದೆ 'ಇಂತಿ ನಿನ್ನ ಪ್ರೀತಿಯ', 'ಪಂಚರಂಗಿ', 'ಲೈಫು ಇಷ್ಟೇನೇ', 'ವಾಸ್ತು ಪ್ರಕಾರ', 'ಮುಗುಳುನಗೆ' ಮತ್ತು 'ಪಂಚ ತಂತ್ರ' ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು.

yograj bhat producing padavi poorva film
ಪದವಿ ಪೂರ್ವ ಚಿತ್ರ ತಂಡ

By

Published : Nov 27, 2019, 1:29 PM IST

ಖ್ಯಾತ ನಿರ್ದೇಶಕ ಯೋಗರಾಜ ಭಟ್​ ಒಬ್ಬ ಕ್ರಿಯೇಟಿವ್​ ಡೈರೆಕ್ಟರ್​​ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಟ್ಟರ ಪಡಸಾಲೆಯಿಂದ ಇದೀಗ ಹೊಚ್ಚ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ. ಆ ಸಿನಿಮಾವೇ 'ಪದವಿ ಪೂರ್ವ'.

ಆದ್ರೆ ಈ ಸಿನಿಮಾಕ್ಕೆ ಯೋಗರಾಜ್ ಭಟ್​​ ಆಕ್ಷನ್​ ಕಟ್​​ ಹೇಳುತ್ತಿಲ್ಲ. ಬದಲಾಗಿದೆ, ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತು, ಪ್ರೊಡ್ಯೂಸರ್​ ಕ್ಯಾಪ್​ ಧರಿಸುತ್ತಿದ್ದಾರೆ. ಈ ಹಿಂದೆ 'ಇಂತಿ ನಿನ್ನ ಪ್ರೀತಿಯ', 'ಪಂಚರಂಗಿ', 'ಲೈಫು ಇಷ್ಟೇನೇ', 'ವಾಸ್ತು ಪ್ರಕಾರ', 'ಮುಗುಳುನಗೆ' ಮತ್ತು 'ಪಂಚ ತಂತ್ರ' ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು.

ಕಾಲೇಜಿನ ಕಥೆಗೆ ಬಂಡವಾಳ ಹಾಕಿದ ಯೋಗರಾಜ್​​ ಭಟ್ರು

ಇದೀಗ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಇವರು ಪದವಿ ಪೂರ್ವ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2020 ಜನವರಿ ತಿಂಗಳಿನಲ್ಲಿ ಸೆಟ್ಟೇರಲಿದೆ ಎಂದು ಹೇಳಲಾಗ್ತಿದೆ. ಸದ್ಯ ಭಟ್ರು ‘ಗಾಳಿಪಟ 2’ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.

‘ಪದವಿ ಪೂರ್ವ’ ಸಿನಿಮಾದಿಂದ ಪೃಥ್ವಿ ಶಾಮನೂರು ನಾಯಕನಾಗಿ ಸ್ಯಾಂಡಲ್​ವುಡ್​​ಗೆ ಪರಿಚಯ ಆಗುತ್ತಿದ್ದಾರೆ. ವಿಶೇಷ ಅಂದ್ರೆ ಇವರ ತಂದೆ ರವಿ ಶಾಮನೂರು ಪದವಿ ಪೂರ್ವ ಸಿನಿಮಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

ಈ ಸಿನಿಮಾಕ್ಕೆ ಕಾಲೇಜಿನ ದಿವಸಗಳೇ ಕಥಾ ವಸ್ತು. ಯುವಕರ ತಲ್ಲಣ, ಆಕಾಂಕ್ಷೆ ಇಲ್ಲಿ ಪ್ರಮುಖ. ಭಟ್ಟರು ಕಾಲೇಜು ವಿಧ್ಯಾರ್ಥಿಗಳ ಕುರಿತು ಅನೇಕ ಗೀತೆಗಳನ್ನು ರಚಿಸಿದ್ದಾರೆ. ಇಲ್ಲಿಯೂ ಅವರ ಗೀತ ಸಾಹಿತ್ಯ ಮುಂದೆವರೆಯಲಿದೆ.

ಪೃಥ್ವಿ ಶಾಮನೂರು

ಹರಿಪ್ರಸಾದ್ ಜಯಣ್ಣ ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇವರಿಗೆ ಭಟ್ಟರ ಜೊತೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವಿದೆ. ಇನ್ನು ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಸಂತೋಷ್ ರಾಯ್ ಪಾತಾಜೆ ಛಾಯಾಗ್ರಾಕರಾಗಿ ಆಯ್ಕೆಯಾಗಿದ್ದಾರೆ.

ಕಾಲೇಜಿನ ಕಥೆಗೆ ಬಂಡವಾಳ ಹಾಕಿದ ಯೋಗರಾಜ್​​ ಭಟ್ರು

ABOUT THE AUTHOR

...view details