ತಮಿಳು ಹಾಸ್ಯನಟ ಯೋಗಿ ಬಾಬು ಇಂದು ಮಂಜು ಭಾರ್ಗವಿ ಜೊತೆ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ತಿರುತನಿಯಲ್ಲಿರುವ ಮುರುಗನ ದೇವಸ್ಥಾನದಲ್ಲಿ ಯೋಗಿ ಬಾಬು ಮದುವೆಯಾಗಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭಕ್ಕೆ ಯೋಗಿ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಿದ್ದಾರೆ.
ಹಸೆಮಣೆ ಏರಿದ ತಮಿಳು ಹಾಸ್ಯನಟ ಯೋಗಿ ಬಾಬು - ಹಸೆಮಣೆ ಏರಿದ ತಮಿಳು ಹಾಸ್ಯನಟ ಯೋಗಿ ಬಾಬು
ಹಾಸ್ಯನಟ ಯೋಗಿ ಬಾಬು ಇಂದು ಮಂಜು ಭಾರ್ಗವಿ ಜೊತೆ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ತಿರುತನಿಯಲ್ಲಿರುವ ಮುರುಗನ ದೇವಸ್ಥಾನದಲ್ಲಿ ಯೋಗಿ ಬಾಬು ಮದುವೆಯಾಗಿದ್ದಾರೆ.
ಹಸೆಮಣೆ ಏರಿದ ತಮಿಳು ಹಾಸ್ಯನಟ ಯೋಗಿ ಬಾಬು
ಈ ಬಗ್ಗೆ ಟ್ವೀಟ್ ಮಾಡಿರುವ ಯೋಗಿ ಬಾಬು, ಇಂದು ಬೆಳಗ್ಗೆ ನನ್ನ ಮತ್ತು ಮಂಜು ಭಾರ್ಗವಿ ಮದುವೆಯಾಗಿದೆ. ನನ್ನ ಕುಲದೇವರ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ. ಇದೇ ಮಾರ್ಚ್‌ನಲ್ಲಿ ಮುಂಬೈನಲ್ಲಿ ರಿಸಪ್ಶನ್ ಮಾಡುವುದಾಗಿ ತಿಳಿಸಿದ್ದಾರೆ.
ಸಿನಿಮಾ ಕೆಲಸಗಳಲ್ಲಿ ಮುಳುಗಿರುವ ಯೋಗಿ ಪ್ರತಿ ದಿನ ಮೂರು ಶಿಫ್ಟ್ಗಳಲ್ಲಿ ಕೆಲಸ ಮಾಡ್ತಾರಂತೆ. ಇದರಿಂದಾಗಿ ಸದ್ಯ ಆರತಕ್ಷತೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ರಿಂದ ಮಾರ್ಚ್‌ನಲ್ಲಿ ಆರತಕ್ಷತೆ ಮಾಡಿಕೊಳ್ಳುವುದಾಗಿ ಯೋಗಿ ತಿಳಿಸಿದ್ದಾರೆ.