ಕರ್ನಾಟಕ

karnataka

ETV Bharat / sitara

'ಲಂಕಾಸುರ'ರಾದ ವಿನೋದ್ ಪ್ರಭಾಕರ್ ಮತ್ತು ಲೂಸ್ ಮಾದ! - ಲಂಕಾಸುರ ಕನ್ನಡ ಸಿನಿಮಾ

ಲೂಸ್ ಮಾದ ಯೋಗಿ ಮತ್ತು ವಿನೋದ್ ಪ್ರಭಾಕರ್ ಅಭಿನಯದ ಲಂಕಾಸುರ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಸ್ತಿಯ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೆರವೇರಿದೆ. ನಿರ್ಮಾಪಕರ ಮಕ್ಕಳಾದ ಮಾಸ್ಟರ್ ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ‌ಮಾಡಿದರು.

yogi and vinod prabhakar in  Lankasura
yogi and vinod prabhakar in Lankasura

By

Published : Jan 15, 2021, 12:27 PM IST

ಸ್ಯಾಂಡಲ್​​ವುಡ್​​ನಲ್ಲಿ ಲೂಸ್ ಮಾದ ಯೋಗಿ 'ಲಂಕೆ' ಸಿನಿಮಾ ಬಳಿಕ ಈಗ 'ಲಂಕಾಸುರ'ನಾಗುತ್ತಿದ್ದಾರೆ. ಅಷ್ಟೇ ಅಲ್ಲ ಇದೇ ಮೊದಲ ಬಾರಿಗೆ ವಿನೋದ್ ಪ್ರಭಾಕರ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ‌.

ಲಂಕಾಸುರ ಸಿನಿಮಾ ಮುಹೂರ್ತ

ಹೌದು.. ಲೂಸ್ ಮಾದ ಯೋಗಿ ಮತ್ತು ವಿನೋದ್ ಪ್ರಭಾಕರ್ ಅಭಿನಯದ ಲಂಕಾಸುರ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಸ್ತಿಯ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೆರವೇರಿದೆ. ನಿರ್ಮಾಪಕರ ಮಕ್ಕಳಾದ ಮಾಸ್ಟರ್ ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ‌ಮಾಡಿದರು.

'ಲಂಕಾಸುರ'ರಾದ ವಿನೋದ್ ಪ್ರಭಾಕರ್ ಮತ್ತು ಲೂಸ್ ಮಾದ!

‌ನಿರ್ದೇಶಕರ ಪುತ್ರ ಮಾಸ್ಟರ್ ಯೋಜಿತ್ ಆರಂಭ ಫಲಕ ತೋರಿದರು. ಸಂಕ್ರಾಂತಿ ಹಬ್ಬದಂದು ಚಿತ್ರೀಕರಣ ಆರಂಭವಾಗಿ ಫೆಬ್ರವರಿ 15ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ‌ ಹಂತದ ಚಿತ್ರೀಕರಣ ನಡೆಯಲಿದೆ. ಈ ಹಿಂದೆ 'ಮೂರ್ಕಲ್ ಎಸ್ಟೇಟ್' ಚಿತ್ರವನ್ನು ನಿರ್ದೇಶಿಸಿದ್ದ ಪ್ರಮೋದ್ ಕುಮಾರ್ ಲಂಕಾಸುರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ‌.

'ಲಂಕಾಸುರ'ರಾದ ವಿನೋದ್ ಪ್ರಭಾಕರ್ ಮತ್ತು ಲೂಸ್ ಮಾದ!

ವಿನೋದ್ ಪ್ರಭಾಕರ್, ಲೂಸ್ ಮಾದ ಯೋಗಿಗೆ ಜೋಡಿಯಾಗಿ ನಾಯಕಿ ಪಾರ್ವತಿ ಅರುಣ್, ಸಹಾನಾ ಗೌಡ ಅಭಿನಯಿಸುತ್ತಿದ್ದಾರೆ‌. ದುನಿಯಾ ಚಿತ್ರದ ನಿರ್ಮಾಪಕರಾದ ಸಿದ್ದರಾಜು, ವಿನೋದ್ ‌ಮಾಸ್ಟರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು.

ವಿಜೇಯತ್ ಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಜ್ಞಾನ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಬಂಡವಾಳ ಹಾಕಿದ್ದಾರೆ.

ABOUT THE AUTHOR

...view details