ತನ್ನ ಅಂತ್ಯಸಂಸ್ಕಾರದಲ್ಲಿ ಯಶ್ ಭಾಗಿಯಾಗಬೇಕೆಂದು ಬರೆದಿಟ್ಟು ಯಶ್ ಅಭಿಮಾನಿ ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮಕೃಷ್ಣ ಆತ್ಮಹತ್ಯೆ.. ಅಭಿಮಾನಿಗಳಿಗಿದು ಮಾದರಿಯಾಗದಿರಲಿ : ಯಶ್ - ಅಭಿಮಾನಿಳಿಗಿದು ಮಾದರಿಯಾಗದಿರಲಿ
ಯಶ್ ಅಭಿಮಾನಿ ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಕೋಡಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಬೇಸರದಿಂದ ಟ್ವೀಟ್ ಮಾಡಿರುವ ಯಶ್, ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. ಜೀವನ.. ಹೆಮ್ಮೆ.. ಆದರೆ ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ.. ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ.. ಕೋಡಿ ದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ... ಓಂ ಶಾಂತಿ... ಎಂದು ಯಶ್ ಬರೆದುಕೊಂಡಿದ್ದಾರೆ.
ಇನ್ನು ರಾಮಕೃಷ್ಣ ತ್ಮ ಅಂತ್ಯ ಸಂಸ್ಕಾರಕ್ಕೆ ಯಶ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬರಬೇಕೆಂದು ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಅಭಿಮಾನಿಯ ಆಸೆಯಂತೆ ಸಿದ್ದರಾಮಯ್ಯ ಕೋಡಿ ದೊಡ್ಡಿಗೆ ಹೋಗಿ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಯಶ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.