ಸಿನಿಮಾದಷ್ಟೇ ತಮ್ಮ ಕುಟುಂಬಕ್ಕೂ ನಟ ರಾಕಿಂಗ್ ಸ್ಟಾರ್ ಯಶ್ ಆದ್ಯತೆ ನೀಡ್ತಾರೆ. ಪತ್ನಿ ರಾಧಿಕಾ ಪಂಡಿತ್, ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಯಶ್ ಸಮಯ ಕಳೆಯುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತವೆ.
ಮಕ್ಕಳ ಜೊತೆ 'ಕೆಜಿಎಫ್' ನಟ ಮೋಜು-ಮಸ್ತಿ ಮಾಡುವ ವಿಡಿಯೋಗಳನ್ನ ರಾಧಿಕಾ ಆಗಾಗ ಸೆರೆಹಿಡಿದು ಹರಿಬಿಡುತ್ತಾರೆ. ಇದೀಗ ವೀಕೆಂಡ್ನಲ್ಲಿ ಪುತ್ರಿ ಐರಾಗೆ ರಾಕಿಂಗ್ ಸ್ಟಾರ್ ಕನ್ನಡ ಪಾಠ ಮಾಡಿದ ವಿಡಿಯೋ ತುಣುಕನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.