ಕರ್ನಾಟಕ

karnataka

ETV Bharat / sitara

ಸೋಷಿಯಲ್ ಮೀಡಿಯಾದಲ್ಲಿ ಮಗನ ಮುದ್ದಾದ ವಿಡಿಯೋ ಹಂಚಿಕೊಂಡ ಯಶ್ - yash teaching car driving to son

ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಉಳಿದುಕೊಂಡು ಫುಲ್ ಟೈಮ್ ಫ್ಯಾಮಿಲಿ ಮ್ಯಾನ್ ಆಗಿರುವ ರಾಕಿಂಗ್ ಸ್ಟಾರ್ ಯಶ್, ಪುತ್ರನ ಮುದ್ದಾದ ವಿಡಿಯೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Yash shared his son video in social media
ಪುತ್ರನ ಮುದ್ದಾದ ವಿಡಿಯೋ ಷೇರ್ ಮಾಡಿದ ಯಶ್

By

Published : Jul 14, 2020, 5:26 PM IST

ಯಾವಾಗಲೂ ಶೂಟಿಂಗ್, ಆಡಿಯೋ ರಿಲೀಸ್, ಪ್ರೆಸ್​ಮೀಟ್, ಡಬ್ಬಿಂಗ್, ಮುಹೂರ್ತ, ವರ್ಕೌಟ್ ಎಂದು ಬ್ಯುಸಿ ಇರುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಕೊರೊನಾ ಕಾರಣದಿಂದ ಫ್ಯಾಮಿಲಿಯೊಂದಿಗೆ ಫುಲ್ ಎಂಜಾಯ್ ಮಾಡುತ್ತಿದ್ದಾರೆ.

ಮಗನೊಂದಿಗೆ ಕಾಲ ಕಳೆಯುತ್ತಿರುವ ಯಶ್

ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಉಳಿದುಕೊಂಡಿರುವ ರಾಕಿಭಾಯ್​ ಮಕ್ಕಳೊಂದಿಗೆ ಮಗುವಾಗಿ ಸಖತ್​ ಖುಷಿಯಾಗಿದ್ದಾರೆ. ಫುಲ್ ಟೈಮ್ ಫ್ಯಾಮಿಲಿ ಮ್ಯಾನ್ ಆಗಿರುವ ಯಶ್​ ಇತ್ತೀಚೆಗಷ್ಟೇ ಮಗಳು ಐರಾ ಜೊತೆ ಮಾಸ್ಕ್ ಧರಿಸಿ ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದರು. ಇದೀಗ ಮಗನಿಗೆ ಹೊಸ ಕಾರು ಕೊಡಿಸಿರುವ ಯಶ್, ಪುತ್ರನಿಗೆ ಹಾಡು ಕೇಳಿಸುತ್ತಾ ಕಾರು ಕಲಿಸಿಕೊಡುತ್ತಿದ್ದಾರೆ. ಆಟಿಕೆ ಕಾರಿನಲ್ಲಿ ಕುಳಿತು ಟ್ವಿಂಕಲ್ ಟ್ವಿಂಕಲ್ ಹಾಡಿಗೆ ತಲೆದೂಗುತ್ತಿರುವ ಮಗನ ವಿಡಿಯೋವನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅಭಿಮಾನಿಗಳಂತೂ ಈ ವಿಡಿಯೋವನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ಐರಾ ಜೊತೆ ಯಶ್ ದಂಪತಿ

ABOUT THE AUTHOR

...view details