ಬೆಂಗಳೂರು:ಹೊಸ ವರ್ಷದ ಆಗಮನಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಕಾಯುತ್ತಿದ್ದಾರೆ. ಇನ್ನು ಪಾರ್ಟಿ ಸಂಭ್ರಮದಲ್ಲಿ ಕೆಲವೊಮ್ಮೆ ಅನಾಹುತಗಳು ಸಂಭವಿಸುವುದುಂಟು. ಈ ಕಾರಣಕ್ಕಾಗಿ ಪೊಲೀಸರು ಮುನ್ನೆಚ್ಚೆರಿಕೆ ಕ್ರಮ ಕೈಗೊಂಡಿದ್ದಾರೆ.
ಹೊಸತನ ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಕುಡಿದು ವಾಹನ ಚಲಾಯಿಸಬೇಡಿ: ಯಶ್ ಮನವಿ - ಬೆಂಗಳೂರು ಪೊಲೀಸರ ಅಭಿಯಾನಕ್ಕೆ ಯಶ್ ಸಾಥ್
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದು ವಾಹನ ಚಾಲನೆ ಮಾಡದಂತೆ ಅರಿವು ಮೂಡಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಕೈಗೊಂಡಿರುವ ಬಿ-ಸೇಫ್ ಅಭಿಯಾನಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದು ವಾಹನ ಚಾಲನೆ ಮಾಡದಂತೆ ಅರಿವು ಮೂಡಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಕೈಗೊಂಡಿರುವ ಬಿ-ಸೇಫ್ ಅಭಿಯಾನಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಓಡಿಸದಂತೆ ಅರಿವು ಮೂಡಿಸುವ ಸಲುವಾಗಿ ಯಶ್ ವಿಡಿಯೋ ಮೂಲಕ ವಾಹನ ಸವಾರರರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಯ್ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇನ್ನಿತರ ಸೋಷಿಯಲ್ ಮೀಡಿಯಾಗಳಲ್ಲಿ ನಗರ ಪೊಲೀಸರು ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 'ಹೊಸತನವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು, ಒಂದು ದಿನದ ಖುಷಿಯಾಗಿ ಅನಾಹುತ ತಂದುಕೊಳ್ಳಬೇಡಿ, ನಿಮ್ಮನ್ನು ನಂಬಿರುವವರಿಗೆ ಮೋಸ ಮಾಡಬೇಡಿ' ಎಂದು ಯಶ್ ಮನವಿ ಮಾಡಿದ್ದಾರೆ.