ಇದೇ ಜನವರಿ 8ರಂದು ಯಶ್ ಹುಟ್ಟುಹಬ್ಬವಿದ್ದು ರಾಕಿಂಗ್ ಸ್ಟಾರ್ ಅಭಿಮಾನಿಗಳು ತಂಬಾನೆ ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೆ ಅವತ್ತೇ ಕೆಜಿಎಫ್-2 ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದ್ದು, ಡಬಲ್ ಖುಷಿಯಲ್ಲಿ ಅಭಿಮಾನಿಗಳಿದ್ದಾರೆ. ಹಾಗಾಗಿ ನಟ ಯಶ್ ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಹಾಕಿರುವ ಯಶ್, ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ಮನೆ ಬಳಿ ಬಾರದೆ ಸಾಮಾಜಿಕ ಜಾಲತಾಣದಲ್ಲಿಯೇ ನನಗೆ ವಿಶ್ ಮಾಡಿ. ನೀವು ಅನವಶ್ಯಕವಾಗಿ ಎಲ್ಲರೂ ಒಟ್ಟಿಗೆ ಸೇರುವುದರಿಂದ ಯಾರಿಗಾದ್ರು ತೊಂದರೆ ಆದ್ರೆ ನನಗೆ ತುಂಬಾ ನೋವಾಗುತ್ತದೆ.